ಬಿಜೆಪಿ ಶಾಸಕರಿಂದ ಹಣ ದೋಚಲು ಯತ್ನಿಸಿದ ಆರೋಪ, ರಿಕ್ಷಾ ಚಾಲಕನ ಅರೆಸ್ಟ್

ಬಿಜೆಪಿ ಶಾಸಕರೊಬ್ಬರ ಬಳಿ ದರೋಡೆ ಮಾಡಲು ಯತ್ನಿಸಿದ ಆಪಾದನೆ ಮೇಲೆ ಆಟೋ ರಿಕ್ಷಾ ಚಾಲಕರೊಬ್ಬರನ್ನು ಬಂಧಿಸಿದ ಘಟನೆ ಮಹಾರಾಷ್ಟ್ರದ ಅಕೋಲಾದಲ್ಲಿ ಜರುಗಿದೆ.

ಮಹಾರಾಷ್ಟ್ರ ವಿಧಾನ ಸಭೆಯ ಮೇಲ್ಮನೆ ಸದಸ್ಯ ವಸಂತ್‌ ಖಾಂಡೇಲ್ವಾಲ್ ತಮ್ಮ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಜರುಗಿದೆ ಎಂದು ವರದಿಗಳು ತಿಳಿಸಿವೆ. ಆಭರಣದಂಗಡಿ ಮಾಲೀಕರಾದ ಖಾಂಡೇಲ್ವಾಲ್ ಆ ವೇಳೆ ತಮ್ಮೊಂದಿಗೆ ನಗದು ಕೊಂಡೊಯ್ಯುತ್ತಿದ್ದರು.

ಖಾಂಡೇಲ್ವಾಲ್ ತಮ್ಮ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಡ್ಡ ಬಂದ ಆಟೋರಿಕ್ಷಾ ಚಾಲಕನೊಬ್ಬ ಅವರೊಂದಿಗೆ ಮಾತಿನ ಚಕಮಕಿಗೆ ಇಳಿದಿದ್ದಾನೆ. ಇದರ ಬೆನ್ನಲ್ಲೇ ಖಾಂಡೇಲ್ವಾಲ್ ಮೊಬೈಲ್ ಕಸಿಯಲು ಆತ ನೋಡಿದ್ದಾನೆ. ಕೂಡಲೇ ಸ್ಥಳೀಯರು ಅಲ್ಲಿ ನೆರೆದಿದ್ದು, ಮೊಬೈಲ್ ಬಿಟ್ಟು ಅಲ್ಲಿಂದ ಪರಾರಿಯಾಗಲು ಆಪಾದಿತ ಯತ್ನಿಸಿದ್ದಾನೆ.

ಪೊಲೀಸರು ಆಪಾದಿತನನ್ನು ಬಂಧಿಸಿದ್ದು, ಆತನ ವಿರುದ್ಧ ಐಪಿಸಿಯ 341 (ದುರುದ್ದೇಶದಿಂದ ಅಡ್ಡಹಾಕುವುದು) ಹಾಗೂ 393 (ಕಳ್ಳತನದ ಯತ್ನ) ಹಾಗೂ ಇತರೆ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read