ಕುಡಿದ ಮತ್ತಿನಲ್ಲಿ ಹಾವಿನ ತಲೆ ಕಚ್ಚಿದ ಭೂಪ ಅರೆಸ್ಟ್

ಉತ್ತರಾಖಂಡ್‌ ನ ನೈನಿತಾಲ್ ಜಿಲ್ಲೆಯಲ್ಲಿ ಹಾವಿನ ತಲೆಯನ್ನು ಕಚ್ಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆರೋಪಿಯನ್ನು ನೈನಿತಾಲ್ ಜಿಲ್ಲೆಯ ನಗೀನಾ ಕಾಲೋನಿ ನಿವಾಸಿ ಕಮಲೇಶ್(34) ಎಂದು ಗುರುತಿಸಲಾಗಿದೆ.

ವ್ಯಕ್ತಿಯ ವಿರುದ್ಧ ವನ್ಯಜೀವಿ(ರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಿಸಿ ವೈದ್ಯಕೀಯ ಪರೀಕ್ಷೆಯ ನಂತರ ಜೈಲಿಗೆ ಕಳುಹಿಸಲಾಗಿದೆ. ವೈರಲ್ ಆಗಿರುವ ವಿಡಿಯೋವನ್ನು ಮೇ 18 ರಂದು ನಾಗಿನಾ ಕಾಲೋನಿಯಲ್ಲಿ ಅತಿಕ್ರಮಣ ವಿರೋಧಿ ಅಭಿಯಾನದಡಿಯಲ್ಲಿ ಮನೆಗಳನ್ನು ಕೆಡವುತ್ತಿದ್ದಾಗ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ.

ಕೆಡವಲಾದ ಮನೆಯಿಂದ ಹಾವು ಹೊರಬಂದಾಗ ಆರೋಪಿ ಐಸ್ ಕ್ರೀಮ್ ಸ್ಟಾಲ್‌ನಲ್ಲಿ ಕುಳಿತಿದ್ದ. ವೀಡಿಯೊದಲ್ಲಿ, ವ್ಯಕ್ತಿ ಹಾವನ್ನು ಹಿಡಿದುಕೊಂಡು ಅದರ ತಲೆಯನ್ನು ಕಚ್ಚುತ್ತಿರುವುದನ್ನು ಕಾಣಬಹುದು. ಅದು ವಿಷಕಾರಿಯಾಗಿರಬಹುದು ಎಂದು ಇನ್ನೊಬ್ಬ ವ್ಯಕ್ತಿ ಎಚ್ಚರಿಸಿದ ನಂತರ ಆ ವ್ಯಕ್ತಿ ತಲೆಯನ್ನು ಉಗುಳಿದನು. ಸ್ಥಳದಲ್ಲಿದ್ದ ಇತರರು ಹಾವನ್ನು ಬಿಡುವಂತೆ ಕೇಳಿದರು, ಆದರೆ ಶೀಘ್ರದಲ್ಲೇ ಹಾವು ಸಾವನ್ನಪ್ಪಿದೆ. ನಂತರ ಆ ವ್ಯಕ್ತಿ ತಲೆಯಿಲ್ಲದ ಹಾವಿಗೆ ತಂಪು ಪಾನೀಯವನ್ನು ಸುರಿದು ಅಗಿಯಲು ಆರಂಭಿಸಿದ. ಕೃತ್ಯ ಎಸಗಿದಾಗ ವ್ಯಕ್ತಿ ಮದ್ಯದ ಅಮಲಿನಲ್ಲಿದ್ದ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read