ಮೋದಿಯವರನ್ನು ಹೊಗಳಿದ್ದಕ್ಕೆ ಕೆಲಸ ಕಳೆದುಕೊಂಡ ಪತ್ರಕರ್ತೆ…!

ಭಾರತೀಯ ಮಜ್ದೂರ್ ಸಂಘ (ಬಿಎಂಎಸ್‌) ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ಮೆಚ್ಚಿ ಮಾತನಾಡಿದ ಕಾರಣಕ್ಕೆ ಮಲಯಾಳಂ ಸುದ್ದಿ ವಾಹಿನಿಯೊಂದು ಹಿರಿಯ ಪತ್ರಕರ್ತರೊಬ್ಬರನ್ನು ಕೆಲಸದಿಂದ ವಜಾಗೊಳಿಸಿದೆ.

ಮಾರ್ಚ್ 8ರಂದು ವಿಶ್ವ ಮಹಿಳಾ ದಿನಾಚರಣೆಯಂದು ಬಿಜೆಪಿಯೊಂದಿಗೆ ನಂಟಿರುವ ಭಾರತೀಯ ಮಜ್ದೂರ್‌ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸುಜಯಾ ಪಾರ್ವತಿ ಮಲಯಾಳಂ ಪ್ರಮುಖ ಸುದ್ದಿವಾಹಿನಿಯೊಂದರಲ್ಲಿ ಸುದ್ದಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ.

“ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷದೊಂದಿಗೆ ನಂಟಿರುವ ಸಂಘಟನೆಗಳು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಹ್ವಾನ ಬಂದರೆ ತಿರಸ್ಕರಿಸಬೇಕಾದ ಪರಿಸ್ಥಿತಿ ಬಂದಿದೆ. ನಾನು ಕೆಲಸ ಮಾಡುವ ಸ್ಥಳದಲ್ಲಿ ಇಂಥ ಸಂದರ್ಭಗಳು ಬರುತ್ತವೆ ಎಂಬುದನ್ನು ನಾನು ಮುಕ್ತವಾಗಿ ಹೇಳುತ್ತಿದ್ದೇನೆ. ಬಿಎಂಎಸ್‌ನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೋದರೆ ಅವರನ್ನು ಸಂಘ ಪರಿವಾರದ ಕಟ್ಟಾಳುಗಳು ಎನ್ನಲಾಗುತ್ತದೆ. ನನಗೆ ಅವರು ಹಾಗೆ ಅಂದಲ್ಲಿ ನಾನು ಆ ಬ್ಯಾಡ್ಜ್ ಧರಿಸಲು ಖುಷಿ ಪಡುತ್ತೇನೆ. ಇತರೆ ವಾಣಿಜ್ಯ ಸಂಘಗಳಂತೆ ಬಿಎಂಎಸ್‌ ಸಹ ಒಂದು ಗೌರವಾನ್ವಿತ ಸಂಘಟನೆಯಾಗಿದೆ. ಕಳೆದ ವರ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಲು ನಿರಾಕರಿಸಬೇಕಾಗಿ ಬಂದಿತ್ತು. ಕಳೆದ ಒಂಬತ್ತು ವರ್ಷಗಳಿಂದ ನರೇಂದ್ರ ಮೋದಿ ಸರ್ಕಾರ ನಮ್ಮ ಜೀವನಗಳನ್ನು ಬದಲಿಸಿದೆ. ನಮ್ಮ ಜೀವನದಲ್ಲಿ ಮಹತ್ದ ಬದಲಾವಣೆಗಳಾಗಿವೆ. ನೀವೆಲ್ಲಾ ಈ ಬದಲಾವಣೆಯನ್ನು ಮುನ್ನಡೆಸುವ ಶಕ್ತಿಯಾಗಲಿದ್ದೀರಿ,” ಎಂದು ಕಾರ್ಯಕ್ರಮದಲ್ಲಿ ಸುಜಯಾ ಮಾತನಾಡಿದ್ದಾರೆ.

ಭಾಷಣದ ವೇಳೆ ತಮ್ಮ ಸಂಸ್ಥೆಯ ಬಗ್ಗೆ ಒಪ್ಪಲಾಗದಂಥ ಮಾತುಗಳನ್ನಾಡಿದ ಕಾರಣಕ್ಕೆ ಸುಜಯಾ ಅವರನ್ನು ಸಂಸ್ಥೆಯಿಂದ ಕೈ ಬಿಡಲಾಗಿದೆ ಎಂದು ಸುದ್ದಿ ವಾಹಿನಿ ತನ್ನ ನಡೆಯನ್ನು ಸಮರ್ಥಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read