ನವದೆಹಲಿ: ಸ್ಮಾರ್ಟ್ ಫೋನ್ ಗಳ ತಯಾರಿಕೆಯಲ್ಲಿ ಭಾರತ ಮಹತ್ವದ ಮೈಲುಗಲ್ಲು ಸಾಧಿಸಿದೆ. ಅಮೆರಿಕಕ್ಕೆ ರಫ್ತು ಮಾಡುವ ಸ್ಮಾರ್ಟ್ ಫೋನ್ ಗಳ ಪ್ರಮಾಣದಲ್ಲಿ ಭಾರತ ಚೀನಾ ದೇಶವನ್ನು ಹಿಂದಿಕ್ಕಿದೆ ಎಂದು ಸಂಶೋಧನಾ ಸಂಸ್ಥೆ ಕನಾಲಿಸ್ ವರದಿ ಮಾಡಿದೆ.
ಮೇಕ್ ಇನ್ ಇಂಡಿಯಾ ಮೊದಲಾದ ಯೋಜನೆಗಳಿಂದಾಗಿ ಭಾರತದ ಔದ್ಯಮಿಕ ಕ್ಷೇತ್ರದಲ್ಲಿ ಭಾರತ ಮಹತ್ವದ ಸಾಧನೆ ಮಾಡಿದೆ. ಅಮೆರಿಕಕ್ಕೆ ಸ್ಮಾರ್ಟ್ ಫೋನ್ ಗಳ ರಫ್ತುವಿನಲ್ಲಿ ಚೀನಾವನ್ನು ಭಾರತ ಹಿಂದಿಕ್ಕಿದೆ. ಭಾರತದ ಪಾಲು ಶೇಕಡ 44ಕ್ಕೆ ಏರಿಕೆಯಾಗಿದ್ದು, ಚೀನಾ ಪಾಲು ಶೇಕಡ 25ಕ್ಕೆ ಇಳಿಕೆಯಾಗಿದೆ. ಈ ವರ್ಷದ ಏಪ್ರಿಲ್ -ಜೂನ್ ವರೆಗಿನ ಎರಡನೇ ತ್ರೈಮಾಸಿಕದಲ್ಲಿ ಅಮೆರಿಕಕ್ಕೆ ಸ್ಮಾರ್ಟ್ ಫೋನ್ ಗಳ ರಫ್ತಿನಲ್ಲಿ ಚೀನಾವನ್ನು ಭಾರತ ಹಿಂದಿಕ್ಕಿದೆ. ಕಳೆದ ವರ್ಷ ಈ ಪಾಲು ಶೇಕಡ 31 ರಷ್ಟು ಇತ್ತು.