ಚಳಿಗಾಲದಲ್ಲಿ ಕಣ್ಮನ ಸೆಳೆಯುವ ಪ್ರವಾಸಿ ಸ್ಥಳಗಳಿಗೆ ಹೋಗಲು ಈಗಲೇ ಮಾಡಿಕೊಳ್ಳಿ ಪ್ಲಾನ್‌

ಚಳಿಗಾಲ ಇನ್ನೇನು ಶುರುವಾಗಲಿದೆ. ವರ್ಷದ ಕೊನೆಯ ತಿಂಗಳು ಡಿಸೆಂಬರ್ ನಲ್ಲಿ ಸಾಮಾನ್ಯವಾಗಿ ರಜಾ ಮಜಾ ಸವಿಯಲು ಜನರು ಪ್ರವಾಸಕ್ಕೆ ಹೋಗ್ತಾರೆ. ಈ ಋತುವಿನಲ್ಲಿ ಹಿಮಭರಿತ ಪ್ರದೇಶಗಳಿಗೆ ಪ್ರವಾಸ ಕೈಗೊಂಡಾಗ ಸಿಗುವ ಖುಷಿಯೇ ಬೇರೆ. ನೀವೂ ಹೀಗೆ ಪ್ರವಾಸ ಕೈಗೊಳ್ಳಬೇಕೆಂದ್ರೆ ಈಗಲೇ ಪ್ಲಾನ್‌ ಮಾಡಿಕೊಳ್ಳಿ.

ಡಿಸೆಂಬರ್ ನಲ್ಲಿ ಮೈಕೊರೆಯುವ ಚಳಿ, ಹಿಮದಿಂದ ಆವೃತವಾಗಿರುವ ಪ್ರದೇಶ, ಎಲ್ಲಿ ನೋಡಿದ್ರೂ ಬೆಣ್ಣೆಯಂತ ಹಿಮ ನೋಡಲು ಎರಡು ಕಣ್ಣು ಸಾಲೋದಿಲ್ಲ. ಅಂತಹ ಪ್ರದೇಶಗಳ ಬಗ್ಗೆ ಇಲ್ಲಿದೆ  ನೋಡಿ ಮಾಹಿತಿ.

ಧೌಲಾದಾರ್ ಡಾಲ್ಹೌಸಿ : ಹಿಮಾಚಲ ಪ್ರದೇಶ ಯಾರಿಗೆ ಇಷ್ಟವಿಲ್ಲ. ಅದ್ರಲ್ಲೂ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹ ಜಾಗ ಧೌಲಾದಾರ್ ಡಾಲ್ಹೌಸಿ. ಚಳಿಗಾಲದಲ್ಲಿ ಇದ್ರ ಸೌಂದರ್ಯ ಇಮ್ಮಡಿಯಾಗುತ್ತದೆ. ಹಿಮದಿಂದ ಆವೃತವಾಗಿರುವ ಪರ್ವತಗಳು ನಿಮ್ಮೆಲ್ಲ ಚಿಂತೆಯನ್ನು ದೂರ ಮಾಡಿ ಕಣ್ಣಿಗೆ, ಮನಸ್ಸಿಗೆ ಮುದ ನೀಡುತ್ತವೆ.

ಸೋನಾಮಾರ್ಗ್ : ಜಮ್ಮು-ಕಾಶ್ಮೀರದಲ್ಲಿರುವ ಸೋನಾಮಾರ್ಗ್ ಸಾಹಸಿ ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸ್ಥಳ.

ಶಿಮ್ಲಾ : ಡಿಸೆಂಬರ್ ಕೊನೆಯ ವಾರಗಳಲ್ಲಿ ಅನೇಕರು ಶಿಮ್ಲಾ ಕಡೆ ಪ್ರಯಾಣ ಬೆಳೆಸ್ತಾರೆ. ಹನಿಮೂನ್ ಗೆ ಪ್ರಸಿದ್ದವಾಗಿರುವ ಶಿಮ್ಲಾವನ್ನೊಮ್ಮೆ ಕಣ್ತುಂಬಿಕೊಂಡು ಬನ್ನಿ.

ಲೆಹ್ : ಟ್ರೆಕಿಂಗ್ ಖಯಾಲಿ ಇರುವ ಜನರು ಲಡಾಕ್ ನ ಲೆಹ್ ಗೆ ಹೋಗಿ ಬನ್ನಿ. ಡಿಸೆಂಬರ್ ಟ್ರೆಕಿಂಗ್ ಗೆ ಒಳ್ಳೆಯ ತಿಂಗಳು. ಅಲ್ಲಿನ ಸೌಂದರ್ಯ ನಿಮ್ಮನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read