ಕಲ್ಲಂಗಡಿ ಸಿಪ್ಪೆಯಿಂದ ಹೀಗೆ ಕಾಪಾಡಿಕೊಳ್ಳಿ ಚರ್ಮದ ಆರೋಗ್ಯ

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸಿದರೆ ತುಂಬಾ ಒಳ್ಳೆಯದು . ಇದರಲ್ಲಿ ಸಾಕಷ್ಟು ನೀರಿನಾಂಶವಿರುವುದರಿಂದ ಇದು ದೇಹವನ್ನು ಹೈಡ್ರೀಕರಿಸುತ್ತದೆ. ಅಷ್ಟೇ ಅಲ್ಲದೇ ಉಪಯೋಗವಿಲ್ಲವೆಂದು ಎಸೆಯುವ ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದ ಕೂಡ ಚರ್ಮಕ್ಕೆ ಹಲವು ಪ್ರಯೋಜನವಿದೆ. ಅದು ಏನೆಂಬುದನ್ನು ತಿಳಿದುಕೊಳ್ಳೋಣ.

*ಸೂರ್ಯ ಬಿಸಿಲಿನಿಂದ ಚರ್ಮ ಡ್ರೈಯಾಗಿ ಹಾನಿಗೊಳಗಾಗುತ್ತದೆ. ಆ ವೇಳೆ ತೇವಾಂಶವನ್ನು ಮರಳಿ ಪಡೆಯಲು ಕಲ್ಲಂಗಡಿ ಸಿಪ್ಪೆಯನ್ನು ಬಳಸಿ. ಇದು ಚರ್ಮದಲ್ಲಿರುವ ಕೊಳೆಯನ್ನು ತೆಗೆದುಹಾಕಿ ಮೊಡವೆಗಳನ್ನು ನಿವಾರಿಸುತ್ತದೆ.

*ಕಲ್ಲಂಗಡಿ ಹಣ್ಣಿನ ಸಿಪ್ಪೆಯ ರಸದಿಂದ ಐಸ್ ಕ್ಯೂಬ್ ತಯಾರಿಸಿ ಇದನ್ನು ನೈಸರ್ಗಿಕ ಟೋನರ್ ಆಗಿ ಬಳಸಬಹುದು. ಇದು ಚರ್ಮದ ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ.

* ಇದು ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದ್ದು, ಕಪ್ಪು ಕಲೆ, ಸುಕ್ಕುಗಳನ್ನು ಕಡಿಮೆ ಮಾಡಿ ಚರ್ಮವನ್ನು ಬಿಗಿಗೊಳಿಸುತ್ತದೆ. ಸಿಪ್ಪೆಯಿಂದ ಮುಖವನ್ನು ಉಜ್ಜಿಕೊಳ್ಳುವುದರಿಂದ ಚರ್ಮವು ಆರೋಗ್ಯಕರವಾಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read