ಮಹೀಂದ್ರ ಥಾರ್ 4X4 ಅಥವಾ 4X2, ಯಾವ ವೇರಿಯಂಟ್‌ ಬೆಸ್ಟ್…….? ಇಲ್ಲಿದೆ ಬೆಲೆ ಮತ್ತು ವಿಶೇಷತೆಗಳ ವಿವರ

ಮಹೀಂದ್ರ ಥಾರ್ ಭಾರತದ ಜನಪ್ರಿಯ ಆಫ್-ರೋಡ್ SUVಗಳಲ್ಲೊಂದು. ಇದು ಎರಡು ರೂಪಾಂತರಗಳಲ್ಲಿ ಲಭ್ಯವಿದೆ: 4X2 ವೇರಿಯಂಟ್ ಮತ್ತು 4X4 ವೇರಿಯಂಟ್‌. ಆದರೆ ಇವೆರಡರಲ್ಲಿ ಯಾವುದು ಬೆಸ್ಟ್‌ ಅನ್ನೋ ಗೊಂದಲ ಸಹಜ. 4X4 ಆಗಿದ್ದ ಥಾರ್‌ನ ಒಂದು ರೂಪಾಂತರ ಮಾರುಕಟ್ಟೆಯಲ್ಲಿ ಲಭ್ಯವಿತ್ತು, ಈಗ ಕಂಪನಿ ಇದನ್ನು 4X2 ರೂಪಾಂತರದಲ್ಲಿಯೂ ಬಿಡುಗಡೆ ಮಾಡಿದೆ. ಥಾರ್‌ ಖರೀದಿಸಲು ಯೋಚಿಸುತ್ತಿದ್ದರೆ ಈ ವೇರಿಯಂಟ್‌ಗಳ ವಿಶೇಷತೆ, ಬೆಲೆಗಳ ಸಂಪೂರ್ಣ ವಿವರ ತಿಳಿದುಕೊಳ್ಳಬೇಕು.

ಮಹೀಂದ್ರ ಥಾರ್‌ 4X2

ಇದರ ಬೆಲೆ 9.99 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದು ಉತ್ತಮ ಇಂಧನ ದಕ್ಷತೆಯನ್ನು ಹೊಂದಿದೆ. ನಗರಗಳಲ್ಲಿ ಚಲಾಯಿಸಲು ಬೆಸ್ಟ್‌. ನಿರ್ವಹಣಾ ವೆಚ್ಚ ಕೂಡ ಕಡಿಮೆ. ಆದರೆ ಈ ಕಾರಿನಲ್ಲಿ ಆಫ್ ರೋಡಿಂಗ್ ಸಾಮರ್ಥ್ಯ ಕಡಿಮೆ. ಹಿಂದಿನ ಚಕ್ರ ಮಾತ್ರ ಶಕ್ತಿಯನ್ನು ಪಡೆಯುತ್ತದೆ.

ಮಹೀಂದ್ರ ಥಾರ್‌ 4X4

ಈ ಮಾದರಿ ಅತ್ಯುತ್ತಮ ಆಫ್-ರೋಡಿಂಗ್ ಸಾಮರ್ಥ್ಯ ಹೊಂದಿದೆ. ಇದರಲ್ಲಿ ನಾಲ್ಕು ಚಕ್ರಗಳಿಗೂ ಪವರ್ ಸಿಗುತ್ತದೆ. ಕಠಿಣ ರಸ್ತೆಗಳಲ್ಲೂ ಉತ್ತಮ ಎಳೆತದ ಸಾಮರ್ಥ್ಯ ಅದಕ್ಕಿದೆ. ಆದರೆ ಈ ಕಾರಿನ ಬೆಲೆ ಕೊಂಚ ಅಧಿಕ, 13.59 ಲಕ್ಷದಿಂದ ಪ್ರಾರಂಭವಾಗುತ್ತದೆ. ಇದರ ಇಂಧನ ದಕ್ಷತೆ ಕಡಿಮೆ ಇದೆ, ಹಾಗಾಗಿ ನಗರದಲ್ಲಿ ಓಡಿಸಲು ಅನುಕೂಲಕರವಾಗಿಲ್ಲ. ಈ ಕಾರಿನ ನಿರ್ವಹಣಾ ವೆಚ್ಚ ಅಧಿಕವಾಗಿದೆ.  ಇವುಗಳಲ್ಲಿ ಯಾವ ರೂಪಾಂತರ ಸೂಕ್ತವಾಗಿದೆ ಎಂಬುದು ಅವರವರ ಅಗತ್ಯತೆಗಳು ಮತ್ತು ಬಜೆಟ್ ಅನ್ನು ಅವಲಂಬಿಸಿರುತ್ತದೆ:

ಆಫ್ ರೋಡಿಂಗ್ ಬಗ್ಗೆ ಒಲವು ಹೊಂದಿದ್ದರೆ 4X4 ರೂಪಾಂತರ ಸೂಕ್ತವಾಗಿರುತ್ತದೆ. ಕಡಿಮೆ ಬೆಲೆಗೆ SUV ಬೇಕು ಎಂದಿದ್ದರೆ, ಹೆಚ್ಚಾಗಿ ನಗರದಲ್ಲಿ ಚಾಲನೆ ಮಾಡಲು 4X2 ರೂಪಾಂತರ ಅತ್ಯುತ್ತಮವಾಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read