ಮಹಿಳೆಯರಿಗೆ ಇಷ್ಟವಾಗ್ತಿದೆ ಈ ಯೋಜನೆ; ಖಾತೆ ತೆರೆಯಲು ಇಲ್ಲಿದೆ ಸಂಪೂರ್ಣ ಮಾಹಿತಿ

ಕಳೆದ ವರ್ಷ ಏಪ್ರಿಲ್ 1 ರಂದು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆ ಶುರುವಾಗಿದೆ. ಇದೊಂದು ಸಣ್ಣ ಉಳಿತಾಯ ಯೋಜನೆಯಾಗಿದೆ. ಇಲ್ಲಿ ಮಹಿಳೆಯರು ಎರಡು ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಮಹಿಳೆಯರಿಗೆ ಮಹಿಳಾ ಸಮ್ಮಾನ್‌ ಉಳಿತಾಯ ಯೋಜನೆ ಇಷ್ಟವಾದಂತೆ ಕಾಣ್ತಿದೆ. ಯಾಕೆಂದ್ರೆ ಈ ಯೋಜನೆಗೆ ಹೂಡಿಕೆ ಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಹಿಂದಿನ ವರ್ಷ ಅಕ್ಟೋಬರ್‌ ವರೆಗೆ 18 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು  ತೆರೆಯಲಾಗಿದೆ.

ಮಹಿಳಾ ಸಮ್ಮಾನ್‌ ಉಳಿತಾಯ ಯೋಜನೆಯಲ್ಲಿ ಎರಡು ವರ್ಷಗಳವರೆಗೆ ಹಣವನ್ನು ಹೂಡಿಕೆ ಮಾಡಬಹುದು. ಈ ಖಾತೆಯನ್ನು ನೀವು ಕನಿಷ್ಠ 1000 ರೂಪಾಯಿಗೆ ತೆರೆಯಬಹುದು. ಶೇಕಡಾ 7.5 ರಷ್ಟು ಬಡ್ಡಿ ನಿಮಗೆ ಈ ಯೋಜನೆಯಲ್ಲಿ ಸಿಗುತ್ತದೆ. ಮಧ್ಯದಲ್ಲೇ ನಿಮಗೆ ಖಾತೆಯನ್ನು ಹಿಂಪಡೆಯುವ ಅವಕಾಶವಿದೆ. ನೀವು ಒಂದು ವರ್ಷದ ನಂತ್ರ ಹಣವನ್ನು ವಾಪಸ್‌ ಪಡೆಯಬಹುದು.

ಈ ಖಾತೆಯನ್ನು ಯಾವುದೇ ಮಹಿಳೆ ತೆರೆಯಬಹುದು. ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಖಾತೆಯನ್ನು ಪಾಲಕರು ತೆರೆಯಬೇಕು. ಫಾರ್ಮ್-1 ಅನ್ನು ಭರ್ತಿ ಮಾಡಬೇಕಾಗುತ್ತದೆ. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಬಣ್ಣದ ಫೋಟೋ ಸೇರಿದಂತೆ ಕೆಲ ದಾಖಲೆ ನೀಡಬೇಕು. ಅಂಚೆ ಕಚೇರಿ ಮಾತ್ರವಲ್ಲದೆ ಬ್ಯಾಂಕ್‌ ನಲ್ಲಿ ಕೂಡ ನೀವು ಖಾತೆ ತೆರೆಯಬಹುದು. ಈ ಯೋಜನೆಯಲ್ಲಿ ನೀವು ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದು, ಎರಡು ವರ್ಷದ ನಂತ್ರ ಖಾತೆ ಮುಚ್ಚುವಾಗ ನಿಮಗೆ 1,16022 ರೂಪಾಯಿ ಸಿಗುತ್ತದೆ. 16022 ರೂಪಾಯಿ ಯೋಜನೆ ನೀಡುವ ಒಟ್ಟೂ ಬಡ್ಡಿಯಾಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read