ತಮ್ಮ ಮೊದಲ ಸಂಭಾವನೆಯನ್ನು ಚಾರಿಟಿಗೆ ನೀಡಿದ ಖ್ಯಾತ ನಟ ಮಹೇಶ್​ ಬಾಬು ಪುತ್ರಿ

ತೆಲುಗು ಸೂಪರ್​ ಸ್ಟಾರ್​ ಮಹೇಶ್​ ಬಾಬು ಹಾಗೂ ನಮ್ರತಾ ಪುತ್ರಿ ಸಿತಾರಾ ಘಟ್ಟನಮೇನಿ ತಮ್ಮ ಮೊದಲ ಸಂಭಾವನೆಯನ್ನು ಚಾರಿಟಿಯೊಂದಕ್ಕೆ ನೀಡುತ್ತಿರೋದಾಗಿ ಹೇಳಿದ್ದಾರೆ.

ಸಿತಾರಾ ಆಭರಣದ ಬ್ರ್ಯಾಂಡ್​​ಗೆ ರೂಪದರ್ಶಿಯಾಗಿ ಕೆಲಸ ಮಾಡಿದ್ದು ಹೈದರಾಬಾದ್​ನ ಪಂಚತಾರಾ ಹೋಟೆಲ್​ನಲ್ಲಿ ತಮ್ಮ ಪೋಟೋಶೂಟ್​ ಫೋಟೋಗಳನ್ನು ಬಿಡುಗಡೆ ಮಾಡಿದ್ದರು. ಈ ವೇಳೆ ಸಿತಾರಾ ತಾಯಿ ನಮ್ರತಾ ಕೂಡ ಹಾಜರಿದ್ದರು.

ಮಾಧ್ಯಮದವರ ಜೊತೆ ಈ ವೇಳೆ ಮಾತನಾಡಿದ ಸಿತಾರಾ, ನನಗೆ ಸಿನಿಮಾಗಳನ್ನು ನೋಡೋದು ಅಂದರೆ ತುಂಬಾನೇ ಇಷ್ಟ. ಅಲ್ಲದೇ ಸಿನಿಮಾಗಳಲ್ಲಿ ನಟಿಸುವ ಬಗ್ಗೆಯೂ ನನಗೆ ಆಸಕ್ತಿಯಿದೆ. ಅಲ್ಲದೇ ನನಗೆ ಇಷ್ಟೊಂದು ಆತ್ಮವಿಶ್ವಾಸ ಮೂಡಲು ಕಾರಣ ನನ್ನ ತಾಯಿ ಎಂದು ಹೇಳಿದ್ದಾರೆ.

ನ್ಯೂಯಾರ್ಕ್​ ಟೈಮ್ಸ್​ ಸ್ಕ್ವೇರ್​ನಲ್ಲಿ ಸಿಗ್ನೇಚರ್​ ಜ್ಯುವೆಲ್ಲರಿ ಕಲೆಕ್ಷನ್​​ ಲಾಂಚ್​ ಆಗಿದ್ದನ್ನು ನೋಡಿ ನನ್ನ ತಂದೆ ಕೂಡ ತುಂಬಾ ಸಂಭ್ರಮ ಪಟ್ಟಿದ್ದಾರೆ. ಅವರು ಈ ಜಾಹಿರಾತು ವಿಡಿಯೋ ನೋಡುವಾಗ ಭಾವುಕರಾದರು ಎಂದು ಸಿತಾರಾ ಹೇಳಿದ್ರು.

ಇದೇ ವೇಳೆ ಪುತ್ರನ ಬಗ್ಗೆ ಮಾತನಾಡಿದ ಮಹೇಶ್​ ಬಾಬು ಪತ್ನಿ ನಮ್ರತಾ, ಗೌತಮ್​ ಮುಂದಿನ ದಿನಗಳಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಬಹುದು. ಆದರೆ ಸದ್ಯಕ್ಕೆ ಆತ ಉನ್ನತ ವ್ಯಾಸಂಗದಲ್ಲಿದ್ದಾನೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read