ಆಗಸ್ಟ್ 9ಕ್ಕೆ ಮರು ಬಿಡುಗಡೆಯಾಗುತ್ತಿದೆ ಮಹೇಶ್ ಬಾಬು ನಟನೆಯ ‘ಬಿಜಿನೆಸ್ ಮ್ಯಾನ್’

Watch Businessman in Telugu 2012 Movie Online | Businessman Telugu Movie - MX Player

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಆಗಸ್ಟ್ 9ರಂದು 48ನೇ ವಸಂತಕ್ಕೆ ಕಾಲಿಡುತ್ತಿದ್ದು ದೇಶಾದ್ಯಂತ ಅವರ ಅಭಿಮಾನಿಗಳು ಸಂಭ್ರಮಿಸಲು ಸಜ್ಜಾಗಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಅವರ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದ್ದಾರೆ.

ಮತ್ತೊಂದೆಡೆ ಮಹೇಶ್ ಬಾಬು ನಟನೆಯ ಸೂಪರ್ ಡೂಪರ್ ‘ಬಿಜಿನೆಸ್ ಮ್ಯಾನ್’ ಚಿತ್ರ ಮಹೇಶ್ ಬಾಬು ಹುಟ್ಟುಹಬ್ಬದ ಪ್ರಯುಕ್ತ ಚಿತ್ರಮಂದಿರಗಳಲ್ಲಿ ರೀ ರಿಲೀಸ್ ಆಗುತ್ತಿದೆ.

2012ರಲ್ಲಿ ತೆರೆಕಂಡಿದ್ದ ಪೂರಿ ಜಗನ್ನಾಥ್ ನಿರ್ದೇಶನದ ಬಿಜಿನೆಸ್ ಮ್ಯಾನ್ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಮಹೇಶ್ ಬಾಬುಗೆ ಜೋಡಿಯಾಗಿ ಕಾಜಲ್ ಅಗರ್ವಾಲ್ ಅಭಿನಯಿಸಿದ್ದು, ಪ್ರಕಾಶ್ ರಾಜ್, ಶ್ವೇತ ಭಾರದ್ವಾಜ್, ಭರತ್ ರೆಡ್ಡಿ, ಜಹಂಗೀರ್ ಖಾನ್ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದರು, ಇದೀಗ ಮತ್ತೊಮ್ಮೆ ಈ ಚಿತ್ರ ರಿಲೀಸ್ ಆಗುತ್ತಿದ್ದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read