‌ʼದಂಗಲ್ʼ ನಟ ಅಮೀರ್ ಖಾನ್ ಬೆಂಬಲದ ನಿರೀಕ್ಷೆಯಲ್ಲಿ ಕುಸ್ತಿಪಟುಗಳು

ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ನಟರು ಬೆಂಬಲ ನೀಡುವ ಬಗ್ಗೆ ತಾವು ನಿರೀಕ್ಷಿಸುವುದಿಲ್ಲ ಎಂದು ಮಾಜಿ ಕುಸ್ತಿಪಟು ಮತ್ತು ಫೋಗಟ್ ಸಹೋದರಿಯರ ತಂದೆ ಮಹಾವೀರ್ ಫೋಗಟ್ ಅವರು ಹೇಳಿದ್ದಾರೆ.

“ನಾನು ಯಾವುದೇ ಸ್ಟಾರ್‌ಗಳಿಂದ ನಿರೀಕ್ಷೆಗಳನ್ನು ಹೊಂದಿಲ್ಲ ಆದರೆ ಅವರು (ಅಮೀರ್ ಖಾನ್) ಬೆಂಬಲವಾಗಿ ಟ್ವೀಟ್ ಮಾಡಿದರೆ, ನಾವು ಅದನ್ನು ಇಷ್ಟಪಡುತ್ತೇವೆ” ಎಂದು ಮಹಾವೀರ್ ಫೋಗಟ್ ತಿಳಿಸಿದರು.

ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಬೆಂಬಲಿಸಿ ಒಂದು ವೇಳೆ ದಂಗಲ್ ಚಿತ್ರದ ನಟ ಅಮೀರ್ ಖಾನ್ ಟ್ವೀಟ್ ಮಾಡಿದರೆ, ನಾವು ಸ್ವಾಗತಿಸುತ್ತೇವೆ. ಆದರೆ ನಟರು ಪ್ರತಿಭಟನೆಯನ್ನ ಬೆಂಬಲಿಸುತ್ತಾರೆ ಎಂಬುದನ್ನ ತಾವು ನಿರೀಕ್ಷಿಸುವುದಿಲ್ಲ ಎಂದಿದ್ದಾರೆ.

ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ದಂಗಲ್ ಚಿತ್ರದಲ್ಲಿ ಅಮೀರ್ ಖಾನ್ ಮಹಾವೀರ್ ಫೋಗಟ್ ಪಾತ್ರವನ್ನು ನಿರ್ವಹಿಸಿದ್ದರು.

ಅಮೀರ್ ಖಾನ್ ಈ ಹಿಂದೆ 2014 ರಲ್ಲಿ ಸತ್ಯಮೇವ ಜಯತೇ ಕಾರ್ಯಕ್ರಮದಲ್ಲಿ ಫೋಗಟ್ ಸಹೋದರಿಯರನ್ನು ಸಂದರ್ಶಿಸಿದ್ದರು. ಅವರು ಇತ್ತೀಚೆಗೆ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಭಾಷಣದ 100 ನೇ ಆವೃತ್ತಿಗೆ ಹಾಜರಾಗಿದ್ದರೂ ಸಹ ಪ್ರತಿಭಟನೆ ವಿಷಯದ ಬಗ್ಗೆ ಮೌನವಾಗಿದ್ದಾರೆ.

ಪ್ರಸ್ತುತ ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಂದ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪವಿದೆ. ಒಲಿಂಪಿಯನ್ ಮೇರಿ ಕೋಮ್ ಅವರ ಮೇಲ್ವಿಚಾರಣೆಯ ಸಮಿತಿಯು ಬ್ರಿಜ್ ಭೂಷಣ್ ವಿರುದ್ಧದ ಆರೋಪಗಳ ತನಿಖೆಯನ್ನು ನಡೆಸಿತು. ಆದರೆ ತೃಪ್ತಿಕರ ವರದಿಯನ್ನು ನೀಡಿಲ್ಲ ಎಂದು ಆರೋಪಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read