ಮಹಾಶಿವರಾತ್ರಿ ಮೊದಲ ದಿನ ಬದಲಾಗಲಿದೆ ಈ ರಾಶಿಯವರ ಅದೃಷ್ಟ

ಮಾರ್ಚ್ 8 ರಂದು ಮಹಾಶಿವರಾತ್ರಿ ಹಬ್ಬ ಆಚರಣೆ ಮಾಡಲಾಗ್ತಿದೆ. ಇದಕ್ಕೂ ಒಂದು ದಿನ ಮೊದಲು ಅಂದ್ರೆ ಮಾರ್ಚ್ 7 ರಂದು ಮೂರು ದೊಡ್ಡ ಬದಲಾವಣೆ ಆಗಲಿದೆ. ಅಂದು ಮಂಗಳ ಗ್ರಹವು ಧನಿಷ್ಠಾ ನಕ್ಷತ್ರವನ್ನು ಪ್ರವೇಶಿಸಲಿದೆ. ಬುಧ ಗ್ರಹವು ಕುಂಭ ರಾಶಿಯಿಂದ ಹೊರ ಬಂದು ಮೀನ ರಾಶಿಯನ್ನು ಪ್ರವೇಶಿಸಲಿದೆ. ಅಲ್ಲದೆ ಶುಕ್ರ ಗ್ರಹ ಕೂಡ ಕುಂಭ ರಾಶಿಗೆ ಸಾಗಲಿದೆ. ಈ ಬದಲಾವಣೆ ಜನರ ಜೀವನದ ಮೇಲಾಗಲಿದೆ. ಕೆಲ ರಾಶಿಯವರ ಅದೃಷ್ಟ ಬದಲಾಗಲಿದೆ. ಮತ್ತೆ ಕೆಲವರು ಸಂಕಷ್ಟ ಅನುಭವಿಸಲಿದ್ದಾರೆ.

ಕನ್ಯಾ ರಾಶಿ : ಮೂರು ಗ್ರಹಗಳ ರಾಶಿ ಬದಲಾವಣೆ ಕನ್ಯಾ ರಾಶಿಯ ಮೇಲೆ ಕಾಣಿಸಲಿದೆ. ಕನ್ಯಾ ರಾಶಿಯವರ ಅದೃಷ್ಟ ಬದಲಾಗಲಿದೆ. ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಬಹುದು.  ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು. ಆರೋಗ್ಯ ಮೊದಲಿಗಿಂತ ಉತ್ತಮವಾಗಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಜಾಗರೂಕತೆ ಬೇಡ.

ಮಿಥುನ ರಾಶಿ : ಬುಧ, ಶುಕ್ರ ಮತ್ತು ಮಂಗಳನ ಸಂಕ್ರಮವು ಮಿಥುನ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಅಚಾನಕ್‌ ಹಣ ಸಿಗಲಿದೆ. ವ್ಯಾಪಾರದಲ್ಲಿ ದುಪ್ಪಟ್ಟು ಲಾಭವಾಗಲಿದೆ. ಸಾಲ ಬಾಧೆಯಿಂದ ಮುಕ್ತಿ ಸಿಗಲಿದೆ.

ಸಿಂಹ ರಾಶಿ : ಬುಧ ಮತ್ತು ಶುಕ್ರ ಸಂಕ್ರಮಣವು ಸಿಂಹ ರಾಶಿಯವರಿಗೆ ಲಾಭ ತರಲಿದೆ. ಸಿಂಹ ರಾಶಿಯ ಜನರು ವ್ಯಾಪಾರ, ವೃತ್ತಿ ಮತ್ತು ಜೀವನದಲ್ಲಿ ಬದಲಾವಣೆ ಕಾಣಲಿದ್ದಾರೆ. ಎಲ್ಲ ಸಮಸ್ಯೆಗೆ ಪರಿಹಾರ ಸಿಗಲಿದೆ. ಒತ್ತಡದಿಂದ ಮುಕ್ತಿ ಸಿಗಲಿದೆ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read