ಮಹಾಶಿವರಾತ್ರಿ ದಿನ ಈ ಗಿಡ ಮನೆಗೆ ತಂದ್ರೆ ದೂರವಾದಂತೆ ನಿಮ್ಮೆಲ್ಲ ಕಷ್ಟ

ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯ ಮಧ್ಯರಾತ್ರಿ ಶಿವನು ನಿರಾಕಾರದಿಂದ ಭೌತಿಕ ರೂಪಕ್ಕೆ ಬಂದನು ಎನ್ನುವ ನಂಬಿಕೆ ಇದೆ. ಹಾಗಾಗಿ ಈ ದಿನವನ್ನು ಮಹಾಶಿವರಾತ್ರಿಯಾಗಿ ಆಚರಣೆ ಮಾಡಲಾಗುತ್ತದೆ. ಈ ಬಾರಿ ಮಾರ್ಚ್  8 ರಂದು ಶಿವರಾತ್ರಿ ಆಚರಣೆ ಮಾಡಲಾಗ್ತಿದೆ. ಉಪವಾಸ, ಜಾಗರಣೆ, ಶಿವನಿಗೆ ವಿಶೇಷ ಅಭಿಷೇಕದ ಜೊತೆ ಮಹಾಶಿವರಾತ್ರಿ ದಿನ ಮನೆಗೆ ಕೆಲವು ಗಿಡಗಳನ್ನು ತಂದು ಬೆಳೆಸಿದ್ರೆ ಶುಭ ಎಂದು ಹೇಳಲಾಗುತ್ತದೆ. ಆ ಗಿಡಗಳಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಸದಾ ನೆಲೆಸಿರುತ್ತದೆ.

ಮಹಾಶಿವರಾತ್ರಿ ದಿನ ಮನೆಗೆ ತರಬೇಕಾದ ಗಿಡ :

 ಶಮಿ ಗಿಡ : ಮಹಾಶಿವರಾತ್ರಿಯಂದು ಶಮಿ ಗಿಡವನ್ನು ಮನೆಗೆ ತನ್ನಿ. ಇದು ಶನಿ ಮತ್ತು ಈಶ್ವರ ಇಬ್ಬರಿಗೂ ಪ್ರಿಯವಾದ ಗಿಡವಾಗಿದೆ. ಮನೆಯಲ್ಲಿ ಇದನ್ನು ಬೆಳೆಸೋದ್ರಿಂದ ವ್ಯಾಪಾರ ಮತ್ತು ವೃತ್ತಿಜೀವನದಲ್ಲಿ ಪ್ರಗತಿ ಕಾಣಬಹುದು. ಈ ದಿನ  ಶಿವಲಿಂಗಕ್ಕೆ  ಶಮಿ ಎಲೆಗಳನ್ನು ಅರ್ಪಿಸಿದ್ರೆ ಶನಿ ದೋಷ ನಿವಾರಣೆಯಾಗುತ್ತದೆ.

ಬಿಲ್ವಪತ್ರೆ ಗಿಡ : ಶಿವನಿಗೆ ಅತ್ಯಂತ ಪ್ರಿಯವಾದ ಗಿಡ ಇದು. ಶಿವನ ಭಕ್ತರು ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸುತ್ತಾರೆ. ಶಿವರಾತ್ರಿ ದಿನ ಈ ಗಿಡವನ್ನು ಮನೆಗೆ ತರುವುದರಿಂದ ಆರ್ಥಿಕ ಮುಗ್ಗಟ್ಟು ದೂರವಾಗುತ್ತದೆ. ಈಶ್ವರನ ಕೃಪೆ ಸದಾ ನಿಮ್ಮ ಮೇಲಿರುತ್ತದೆ.

ಧಾತುರ : ಸಮುದ್ರ ಮಂಥನದ ವೇಳೆ ಶಿವ ವಿಷ ಕುಡಿದಾಗ, ಆತನ ತಲೆ ಮೇಲೆ ಧಾತುರ ಎಲೆಗಳನ್ನು ಇಡಲಾಗಿತ್ತು. ಹಾಗಾಗಿಯೇ ಶಿವನಿಗೆ ಇದು ಪ್ರಿಯವಾದ ಗಿಡ. ಮಹಾಶಿವರಾತ್ರಿ ದಿನ ನೀವು ಧಾತುರ ಗಿಡವನ್ನು ಮನೆಯಲ್ಲಿ ನೆಟ್ಟರೆ ಸಂತೋಷ ನೆಲೆಸುತ್ತದೆ. ಪಿತೃದೋಷ ನಿವಾರಣೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read