ಥಾಣೆ: ತನ್ನ ಮಗನನ್ನು ಬೈದಿದ್ದಾಳೆ ಎಂದು ವ್ಯಕ್ತಿಯೋರ್ವ ಸ್ವಂತ ಸಹೋದರಿಯನ್ನೇ ಕೊಲೆ ಮಾಡಿರುವ ವಿಚಿತ್ರ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಸಂಜು ಲೋಖಂಡೆ ಎಂಬಾತ, ತನ್ನ 40 ವರ್ಷದ ಸಹೋದರಿಯನ್ನು ಹತ್ಯೆಗೈದು ಬಳಿಕ ಆಕೆಯ ಮಗನ ಮೇಲೂ ಹಲ್ಲೆ ನಡೆಸಿದ್ದಾನೆ. ಸಹೋದರಿ ತನ್ನ 10 ವರ್ಷದ ಮಗನನ್ನು ಗದರಿದ್ದಾಳೆ ಎಂಬ ಕಾರಣಕ್ಕೆ ಕೋಪಗೊಂಡ ಸಂಜು, ಮನಬಂದಂತೆ ಸಹೋದರಿಯನ್ನು ಕಬ್ಬಿಣದ ಪೈಪ್ ನಿಂದ ಥಳಿಸಿ, ಕೊಲೆ ಮಾಡಿದ್ದಾನೆ.
ಥಾಣೆಯ ಕೊಕಣಿ ಪದಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ದುರ್ಗಾ ಮೃತ ಮಹಿಳೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 302, 307 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.