Shocking: ಮಧ್ಯರಾತ್ರಿ ಗೆಳತಿ ಮನೆಗೆ ಅಪ್ರಾಪ್ತನ ಭೇಟಿ; ಸಿಗಬಾರದ ಸ್ಥಿತಿಯಲ್ಲಿ ಸಿಕ್ಕಿಬಿದ್ದವನನ್ನು ಹತ್ಯೆಗೈದ ಕುಟುಂಬಸ್ಥರು

10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತನೊಬ್ಬ ಮಧ್ಯರಾತ್ರಿ ತನ್ನ ಗೆಳತಿ ಮನೆಗೆ ಹೋಗಿದ್ದು, ಈ ವೇಳೆ ಎಚ್ಚರಗೊಂಡ ಕುಟುಂಬಸ್ಥರ ಕಣ್ಣಿಗೆ ನೋಡಬಾರದ ಸ್ಥಿತಿಯಲ್ಲಿ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಇದರಿಂದ ಆಕ್ರೋಶಗೊಂಡು ಅಪ್ರಾಪ್ತನನ್ನು ಮನಬಂದಂತೆ ಥಳಿಸಿ ಹತ್ಯೆ ಮಾಡಲಾಗಿದೆ.

ಮಹಾರಾಷ್ಟ್ರದ ವಿಜಪುರ್ ತಾಲೂಕಿನ ಬಿವಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬೋರ್ಸಾರ್ ಗ್ರಾಮದ ಸಚಿನ್ ಕಾಳೆ ಎಂಬ ಅಪ್ರಾಪ್ತ ಬಾಲಕ ದಾದಾ ಸಾಹೇಬ್ ಎಂಬವರ ಮಗಳನ್ನು ಭೇಟಿಯಾಗಲು ಮಂಗಳವಾರ ರಾತ್ರಿ ತೆರಳಿದ್ದ. ಈ ವೇಳೆ ಆತನ ಗೆಳತಿಯ ಕುಟುಂಬಸ್ಥರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಆಕ್ರೋಶಗೊಂಡ ಹುಡುಗಿಯ ಅಜ್ಜ ಮಾಧವ್ ಜಾಂಗಾಳೆ, ತಂದೆ ದಾದಾ ಸಾಹೇಬ್ ಹಾಗೂ ಚಿಕ್ಕಪ್ಪ ಸುನಿಲ್ ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದಾರೆ. ಬಳಿಕ ಬಾಲಕನ ಮೃತ ದೇಹವನ್ನು ಹೊಲವೊಂದರಲ್ಲಿ ಎಸೆದಿದ್ದಾರೆ. ಮಾರನೇ ದಿನ ಮೃತ ದೇಹ ಗ್ರಾಮಸ್ಥರ ಕಣ್ಣಿಗೆ ಬಿದ್ದಿತ್ತು.

ಅವರುಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ಕೈಗೊಂಡ ವೇಳೆ ಗ್ರಾಮದ ಹುಡುಗಿ ಜೊತೆ ಅಪ್ರಾಪ್ತನಿಗೆ ಸಂಬಂಧವಿರುವುದು ಗೊತ್ತಾಗಿದೆ. ಮೊದಲಿಗೆ ಹುಡುಗಿ ಇದನ್ನು ನಿರಾಕರಿಸಿದಳಾದರೂ ಬಳಿಕ ಒಪ್ಪಿಕೊಂಡಿದ್ದಾಳೆ. ಇದೀಗ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read