BREAKING: ಕೇಂದ್ರ ಸಚಿವರ ಪುತ್ರಿಗೆ ಕಿರುಕುಳ ; ಓರ್ವ ಆರೋಪಿ ಅರೆಸ್ಟ್

ಮಹಾರಾಷ್ಟ್ರದ ಮುಕ್ತೈನಗರದಲ್ಲಿ ನಡೆದ ಮಹಾಶಿವರಾತ್ರಿ ಜಾತ್ರೆಯಲ್ಲಿ ಕೇಂದ್ರ ಸಚಿವೆ ರಕ್ಷಾ ಖಡ್ಸೆ ಅವರ ಪುತ್ರಿ ಮತ್ತು ಇತರ ಹುಡುಗಿಯರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಜಲಗಾಂವ್ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಉಳಿದ ಆರು ಮಂದಿ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಜಾತ್ರೆಯಲ್ಲಿ ಯುವಕರ ಗುಂಪೊಂದು ಹುಡುಗಿಯರಿಗೆ ಕಿರುಕುಳ ನೀಡಿದ್ದು, ಅವರ ಫೋಟೋಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲು ಪ್ರಯತ್ನಿಸಿತ್ತು.

ಜಲಗಾಂವ್ ಉಪ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣನಾಥ್ ಪಿಂಗ್ಲೆ ಮಾಹಿತಿ ನೀಡಿದ್ದು, “ಫೆಬ್ರವರಿ 28 ರಂದು ಕೋಥಾಲಿ ಗ್ರಾಮದ ಯಾತ್ರೆಯಲ್ಲಿ ಆರೋಪಿಗಳಾದ ಅನಿಕೇತ್ ಭೋಯ್, ಪಿಯೂಷ್ ಮೋರೆ, ಸಹಮ್ ಕೋಲಿ, ಅನುಜ್ ಪಾಟೀಲ್, ಕಿರಣ್ ಮಾಲಿ ಮತ್ತು ಸಚಿನ್ ಪಾಲ್ವಿ ಭಾಗಿಯಾಗಿದ್ದರು. ಈ ಹುಡುಗರು 3-4 ಹುಡುಗಿಯರನ್ನು ಹಿಂಬಾಲಿಸಿ ಅನುಚಿತ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಬಲಿಪಶುವಿನ ತಾಯಿಯ ದೂರಿನ ಮೇರೆಗೆ ಪೋಕ್ಸೋ ಕಾಯ್ದೆ ಮತ್ತು ಲೈಂಗಿಕ ಕಿರುಕುಳದ ಆರೋಪಗಳನ್ನು ದಾಖಲಿಸಲಾಗಿದೆ. ಅನಿಕೇತ್ ಭೋಯ್ ವಿರುದ್ಧ ಈ ಹಿಂದೆ ನಾಲ್ಕು ಪ್ರಕರಣಗಳು ದಾಖಲಾಗಿವೆ” ಎಂದು ತಿಳಿಸಿದ್ದಾರೆ. “ಕೇಂದ್ರ ಸಚಿವರ ಭದ್ರತಾ ಸಿಬ್ಬಂದಿಯೊಂದಿಗೆ ಗಲಾಟೆಯೂ ನಡೆದಿದೆ. ಅವರ ದೂರಿನನ್ನೂ ದಾಖಲಿಸಲಾಗಿದೆ” ಎಂದು ಸೇರಿಸಿದರು.

“ಯಾವುದೇ ಒತ್ತಡಕ್ಕೆ ಮಣಿದಿಲ್ಲ. ಎರಡು ದಿನಗಳಿಂದ ನಾನೇ ಖುದ್ದಾಗಿ ಸ್ಥಳದಲ್ಲಿದ್ದೇನೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಲಿಪಶುವಾಗಿರುವುದರಿಂದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ವೀಡಿಯೊ ಕರೆಗಳು ಮತ್ತು ಡಿಜಿಟಲ್ ದೂರುಗಳಿಂದಾಗಿ ಐಟಿ ಕಾಯ್ದೆಯನ್ನೂ ಸೇರಿಸಲಾಗಿದೆ. ಒಬ್ಬನನ್ನು ಬಂಧಿಸಲಾಗಿದೆ, ಉಳಿದವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ಡಿವೈಎಸ್ಪಿ ಭರವಸೆ ನೀಡಿದರು. ರಕ್ಷಾ ಖಡ್ಸೆ ಅವರು ತಮ್ಮ ಪುತ್ರಿ ಮತ್ತು ಬೆಂಬಲಿಗರೊಂದಿಗೆ ಪೊಲೀಸ್ ಠಾಣೆಗೆ ದೂರು ನೀಡಲು ಆಗಮಿಸಿದ್ದರು. “ನಾನು ಸಚಿವೆಯಾಗಿ ಅಲ್ಲ, ತಾಯಿಯಾಗಿ ನ್ಯಾಯಕ್ಕಾಗಿ ಬಂದಿದ್ದೇನೆ. ಸಾರ್ವಜನಿಕ ಪ್ರತಿನಿಧಿಯ ಮಗಳಿಗೇ ಕಿರುಕುಳವಾದರೆ ಸಾಮಾನ್ಯ ಜನರ ಗತಿ ಏನು? ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಕ್ರಮಕ್ಕೆ ಒತ್ತಾಯಿಸುತ್ತೇನೆ” ಎಂದು ಖಡ್ಸೆ ಆಕ್ರೋಶ ವ್ಯಕ್ತಪಡಿಸಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read