BREAKING: ಮಹಾರಾಷ್ಟ್ರ ಚುನಾವಣೆಗೆ ಬಿಜೆಪಿ 2ನೇ ಪಟ್ಟಿ ಪ್ರಕಟ: ಇಬ್ಬರು ಹಾಲಿ ಶಾಸಕರಿಗೆ ಕೊಕ್

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಇಂದು 22 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಬಿಜೆಪಿ ಆರು ಹಾಲಿ ಶಾಸಕರನ್ನು ಉಳಿಸಿಕೊಂಡಿದೆ ಮತ್ತು ಇಬ್ಬರನ್ನು ಕೈಬಿಟ್ಟಿದೆ. ಶಿವಸೇನೆ ಮತ್ತು ಎನ್‌ಸಿಪಿ ಜೊತೆಗೆ ಆಡಳಿತಾರೂಢ ಮಹಾಯುತಿ ಒಕ್ಕೂಟದ ಸದಸ್ಯರಾಗಿರುವ ಕೇಸರಿ ಪಕ್ಷವು ಇದುವರೆಗೆ 121 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.

ಎರಡನೇ ಪಟ್ಟಿಯಲ್ಲಿ, ಪಕ್ಷವು ಅಕೋಟ್, ನಾಸಿಕ್ ಸೆಂಟ್ರಲ್, ಪೆನ್, ಖಡಕ್ವಾಸಲಾ, ಪುಣೆ ಕಂಟೋನ್ಮೆಂಟ್ ಮತ್ತು ಉಲ್ಲಾಸನಗರದ ಶಾಸಕರನ್ನು ಉಳಿಸಿಕೊಂಡು ವಾಶಿಮ್ ಮತ್ತು ಗಡ್ಚಿರೋಲಿಯ ಹಾಲಿ ಶಾಸಕರನ್ನು ಬದಲಾಯಿಸಿದೆ.

ಜಾಟ್‌ನಿಂದ ಗೋಪಿಚಂದ್ ಪಡಲ್ಕರ್ ಮತ್ತು ಲಾತೂರ್ ಗ್ರಾಮಾಂತರದಿಂದ ರಮೇಶ್ ಕರದ್ ಅವರನ್ನು ಕಣಕ್ಕಿಳಿಸಲಾಗಿದೆ.

2019ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 105, ಶಿವಸೇನೆ 56, ಕಾಂಗ್ರೆಸ್ 44. 2014ರಲ್ಲಿ ಬಿಜೆಪಿ 122, ಶಿವಸೇನೆ 63, ಕಾಂಗ್ರೆಸ್ 42 ಸ್ಥಾನ ಗಳಿಸಿತ್ತು.

ನವೆಂಬರ್ 20 ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ 99 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿತ್ತು.

https://twitter.com/ANI/status/1850143781372428750

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read