ಮಹಾರಾಷ್ಟ್ರದ ನೈಗಾಂವ್‌ನಲ್ಲಿ ನಡೆದ ಪ್ರಾಣಿ ಹಿಂಸೆಯ ಆಘಾತಕಾರಿ ಘಟನೆಯೊಂದರಲ್ಲಿ, ವೃದ್ದನೊಬ್ಬ ಹೆಣ್ಣು ನಾಯಿಯೊಂದಿಗೆ ಶೌಚಾಲಯದೊಳಗೆ ಸಿಕ್ಕಿಬಿದ್ದಿದ್ದಾನೆ. ಸಾಮಾಜಿಕ ಕಾರ್ಯಕರ್ತೆಯೊಬ್ಬರು ಕಟ್ಟಡ ನಿರ್ಮಾಣ ಸ್ಥಳದ ಶೌಚಾಲಯದೊಳಗೆ ಹೆಣ್ಣು ನಾಯಿಯೊಂದಿಗೆ ವ್ಯಕ್ತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ಈ ಘಟನೆಯನ್ನು ತನ್ನ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಇದರಲ್ಲಿ, ಅರವತ್ತರ ಹರೆಯದ ವಯಸ್ಸಾದ ವ್ಯಕ್ತಿ, ನಾಯಿಯನ್ನು ಶೌಚಾಲಯಕ್ಕೆ ಕರೆದೊಯ್ಯುತ್ತಿರುವುದನ್ನು ನೋಡಬಹುದು, ಇದು ಕೆಟ್ಟ ಉದ್ದೇಶದಿಂದ ಆರೋಪಿಸಲಾಗಿದ್ದು,. ಮಹಿಳೆ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಆಗಮಿಸಿ ನಾಯಿಯನ್ನು ಅಪಾಯದಿಂದ ರಕ್ಷಿಸಿದ್ದಾರೆ. ಹೆಣ್ಣು ನಾಯಿಯನ್ನು ಸಾರ್ವಜನಿಕ ಶೌಚಾಲಯಕ್ಕೆ ಕೊಂಡೊಯ್ಯಲಾಗಿದೆ ಎಂಬ ಮಾಹಿತಿ ಪಡೆದ ನಂತರ ತಾನು ಸ್ಥಳಕ್ಕೆ ಹೋಗಿದ್ದೆ ಎಂದು ಅವರು ಹೇಳಿದ್ದಾರೆ.
ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅಮಾಯಕ ಪ್ರಾಣಿಗೆ ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಾಣಿ ಪ್ರಿಯರು ಮತ್ತು ಕಾರ್ಯಕರ್ತರು ಸಂಬಂಧಪಟ್ಟವರನ್ನು ಒತ್ತಾಯಿಸಿದ್ದಾರೆ.
View this post on Instagram
A post shared by PURE ANIMAL LOVERS PAL WELFARE FOUNDATION (@palfoundation.in)