ಮುಂಬೈ: ಗಣೇಶ ಮೂರ್ತಿ ವಿಸರ್ಜನೆ ಅದ್ಧೂರಿಯಾಗಿ ನೆರವೇರಿದೆ. ಹಲವೆಡೆ ಗನೇಶ ವಿಸರ್ಜನೆ ವೇಳೆ ದುರಂತ ಸಂಭವಿಸಿದೆ. ಪ್ರತ್ಯೇಕ ಘಟನೆಯಲ್ಲಿ ಮಹಾರಾಷ್ಟ್ರದ ವಿವಿಧೆಡೆ ನಾಲ್ವರು ಸಾವನ್ನಪ್ಪಿದ್ದಾರೆ. 13 ಜನರು ನಾಪತ್ತೆಯಾಗಿದ್ದಾರೆ.
ಪುಣೆ ಜಿಲ್ಲೆಯ ಚಕನ್ ಪ್ರದೇಶದಲ್ಲಿ ವಾಕಿ ಖುರ್ದ್ ನ ಭಾಮಾ ನದಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಶೆಲ್ ಪಿಂಪಾಲ್ ಗಾಂವ್ ನಲ್ಲಿ ಓರ್ವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಪುಣೆ ಗ್ರಾಮೀಣ ಪ್ರದೇಶದ ಬಿರ್ವಾಡಿಯಲ್ಲಿ ಮತ್ತೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇನ್ನಿಬ್ಬರ ಮೃತದೇಹಕ್ಕಾಗಿ ಶೋಧಕಾರ್ಯಾಚರಣೆ ನಡೆಸಲಾಗಿದೆ.
ನಾಂದೇಡ್ ಜಿಲ್ಲೆಯ ಗಡೇಗಾಂವ್ ನಲ್ಲಿ ಮೂವರು ನದಿಯಲ್ಲಿ ಕೊಚ್ಚಿ ಹೋಗಿದ್ದು, ಓರ್ವರನ್ನು ರಕ್ಷಿಸಲಾಗಿದೆ. ನಾಶಿಕ್, ಜಲಗಾಂವ್, ಥಾಣೆ, ಅಮರಾವತಿಯಲ್ಲಿ ಕೂಡ ಇಂತದ್ದೇ ಘಟನೆಗಳು ನಡೆದಿವೆ. ಒಟ್ಟು 13 ಜನರು ಕಾಣೆಯಾಗಿದ್ದಾರೆ.