ಮಹಾರಾಷ್ಟ್ರ ದಂಪತಿಯಿಂದ ಘೋರ ಕೃತ್ಯ: ಮಹಿಳೆ ಶಿರಚ್ಛೇದ, ತುಂಡು ತುಂಡಾಗಿ ದೇಹ ಕತ್ತರಿಸಿ ನದಿಗೆ ಎಸೆತ

ಪುಣೆ: ಪುಣೆ ನಗರದ ನದಿಯ ದಡದಲ್ಲಿ ತಲೆಯಿಲ್ಲದ ಮಹಿಳೆ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಬಂಧಿತರನ್ನು ಅಶ್ಫಾಕ್ ಖಾನ್ ಮತ್ತು ಅವರ ಪತ್ನಿ ಹಮೀದಾ ಎಂದು ಗುರುತಿಸಲಾಗಿದ್ದು, ಅವರು ಕೊಳೆಗೇರಿಯೊಂದರ ರೂಂ ಮಾಲೀಕತ್ವದ ವಿವಾದದಲ್ಲಿ ತನ್ನ 48 ವರ್ಷದ ಸಹೋದರಿಯನ್ನು ಕೊಂದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಗಸ್ಟ್ 26 ರಂದು ಖಾರಾಡಿ ಪ್ರದೇಶದ ಮುತಾ ನದಿಯ ದಡದಲ್ಲಿ ಕೈಕಾಲುಗಳನ್ನು ಕತ್ತರಿಸಿದ ಸ್ಥಿತಿಯಲ್ಲಿ ಮಹಿಳೆಯ ಶವವನ್ನು ಪೊಲೀಸರು ಪತ್ತೆ ಮಾಡಿದರು. ತನಿಖೆಯ ನಂತರ ಮೃತ ಮಹಿಳೆಯನ್ನು ಸಕೀನಾ ಖಾನ್(48) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಜಂಟಿ ಪೊಲೀಸ್ ಆಯುಕ್ತ ರಂಜನ್‌ಕುಮಾರ್ ಶರ್ಮಾ ಮಾತನಾಡಿ, ಪುಣೆ ನಗರ ಪೊಲೀಸರು ಮಹಿಳೆಯ ಮುಂಡವನ್ನು ಮುಠಾ ನದಿಯ ದಡದಿಂದ ವಶಪಡಿಸಿಕೊಂಡಿದ್ದಾರೆ. ದೇಹದ ಮೇಲೆ ಯಾವುದೇ ಬಟ್ಟೆ ಇರಲಿಲ್ಲ, ಮತ್ತು ಆರೋಪಿಗಳು ಅದನ್ನು ನದಿಗೆ ಎಸೆಯುವ ಮೊದಲು ಸಾಕ್ಷ್ಯ ನಾಶಪಡಿಸಲು ಅದನ್ನು ತುಂಡರಿಸಿದ್ದಾರೆ.

ಶಿವಾಜಿ ನಗರ ಪ್ರದೇಶದ ಕೊಳೆಗೇರಿಯೊಂದರ ರೂಂ ಮಾಲೀಕತ್ವದ ಬಗ್ಗೆ ಸಂತ್ರಸ್ತೆ ಸಕೀನಾ ತನ್ನ ಸಹೋದರನೊಂದಿಗೆ ವಿವಾದ ಹೊಂದಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. ಸಕೀನಾ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದ್ದು, ಆಕೆಯ ನಾಪತ್ತೆಗೆ ಸಂಬಂಧಿಸಿದಂತೆ ಆಕೆಯ ಸಹೋದರ ಅಶ್ಫಾಕ್ ಮತ್ತು ಸೊಸೆ ಹಮೀದಾ ಅವರನ್ನು ಬಂಧಿಸಲಾಗಿದೆ. ಇವರಿಬ್ಬರು ಸಂತ್ರಸ್ತೆಯ ಕತ್ತು ಹಿಸುಕಿ, ಆಕೆಯ ಶಿರಚ್ಛೇದ ಮಾಡಿ, ಸಾಕ್ಷ್ಯ ನಾಶಪಡಿಸಲು ದೇಹವನ್ನು ತುಂಡರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read