ಮೆಡಿಕಲ್ ವಿದ್ಯಾರ್ಥಿನಿಯ ಆತ್ಮಹತ್ಯೆ ತಡೆಯಲು ಮುಂಬೈ ಕ್ರೈಂ ಬ್ರ್ಯಾಂಚ್ ಗೆ ನೆರವಾದ ಇಂಟರ್ ಪೋಲ್ ಮಾಹಿತಿ

ಪುಣೆಯಲ್ಲಿ ನೆಲೆಸಿರುವ ಮೊದಲ ವರ್ಷದ ಹೋಮಿಯೋಪತಿಕ್ ಮೆಡಿಸಿನ್ ಮತ್ತು ಸರ್ಜರಿ (BHMS) ವಿದ್ಯಾರ್ಥಿಯ ಆತ್ಮಹತ್ಯೆಯನ್ನು ತಡೆಯಲು ಇಂಟರ್‌ಪೋಲ್‌ನ ಎಚ್ಚರಿಕೆ ಮುಂಬೈ ಕ್ರೈಂ ಬ್ರಾಂಚ್‌ಗೆ ಕಳೆದ ವಾರ ಸಹಾಯ ಮಾಡಿರೋ ಘಟನೆ ಬೆಳಕಿಗೆ ಬಂದಿದೆ.

ಕ್ರೈಂ ಬ್ರಾಂಚ್‌ನ ಅಪರಾಧ ಗುಪ್ತಚರ ಘಟಕ (ಸಿಐಯು) ಮಾಹಿತಿ ಪಡೆದ ಎರಡು ಗಂಟೆಗಳಲ್ಲಿ ಪುಣೆಯನ್ನು ತಲುಪಿ 22 ವರ್ಷದ ವಿದ್ಯಾರ್ಥಿಯನ್ನು ಕೌನ್ಸಿಲಿಂಗ್‌ ಗೆ ಕರೆದೊಯ್ದಿದೆ. ಅಧಿಕಾರಿಗಳ ಪ್ರಕಾರ ವಿದ್ಯಾರ್ಥಿಯು ವೈಯಕ್ತಿಕ ಮತ್ತು ಶೈಕ್ಷಣಿಕ ಕಾರಣಗಳಿಂದ ಖಿನ್ನತೆಗೆ ಒಳಗಾಗಿದ್ದರು.

ವಿದ್ಯಾರ್ಥಿಯು ಖಿನ್ನತೆಗೆ ಸಂಬಂಧಿಸಿದಂತೆ ವೆಟರನ್ಸ್ ಹೆಸರಿನ ಯುಎಸ್ ಮೂಲದ ವೆಬ್‌ಸೈಟ್‌ನೊಂದಿಗೆ ಸಮಾಲೋಚನೆ ನಡೆಸುತ್ತಿದ್ದರು. ಸಂಭಾಷಣೆಯ ಸಮಯದಲ್ಲಿ ವಿದ್ಯಾರ್ಥಿ ಸಾಯಲು ಬಯಸಿರುವುದಾಗಿ ಹೇಳಿದ್ದು ಶಾಂತಿಯುತವಾಗಿ ಸಾವು ತರಬಲ್ಲ ಔಷಧಿಯ ಹೆಸರನ್ನು ಕೇಳಿದ್ದರು. ವಿದ್ಯಾರ್ಥಿ ಸುಮಾರು 3.5 ಗಂಟೆಗಳ ಕಾಲ ಸಲಹೆಗಾರರೊಂದಿಗೆ ಮಾತನಾಡಿದ್ದು ಶೈಕ್ಷಣಿಕ ಜೀವನ ಮತ್ತು ವೈಯಕ್ತಿಕ ಸಮಸ್ಯೆಗಳ ಬಗ್ಗೆ ತುಂಬಾ ಖಿನ್ನತೆಗೆ ಒಳಗಾಗಿದ್ದು ಗೊತ್ತಾಗಿದೆ.

ಸಲಹೆಗಾರರು ವಿದ್ಯಾರ್ಥಿಗೆ ಸಲಹೆ ನೀಡುತ್ತಾ ಅವರ ವಿವರಗಳನ್ನು ತೆಗೆದುಕೊಂಡರು. ಆದರೆ ಏತನ್ಮಧ್ಯೆ ವಿದ್ಯಾರ್ಥಿ ಶಾಂತಿಯುತ ಸಾವಿಗೆ ಔಷಧಿಗಳ ಬಗ್ಗೆ ಕೇಳುತ್ತಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದರು.

ವೆಬ್‌ಸೈಟ್ ನಡೆಸುತ್ತಿದ್ದವರು ವಿದ್ಯಾರ್ಥಿಯೊಂದಿಗೆ ಸಂಭಾಷಣೆ ನಡೆಸುತ್ತಿರುವಾಗ, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅವರು ಇಂಟರ್‌ಪೋಲ್‌ಗೆ ಎಚ್ಚರಿಕೆ ನೀಡಿದ್ದು, ತುರ್ತು ವಿನಂತಿಯನ್ನು ಅದರ ಭಾರತೀಯ ಕೌಂಟರ್‌ಪಾರ್ಟ್‌ಗಳಿಗೆ ಕಳುಹಿಸಿ ಅಂತಿಮವಾಗಿ ಅಪರಾಧ ಬ್ರಾಂಚ್‌ನೊಂದಿಗೆ ವಿವರಗಳನ್ನು ಹಂಚಿಕೊಂಡರು. ಮಾಹಿತಿಯ ಆಧಾರದ ಮೇಲೆ ವ್ಯಕ್ತಿಯ ವಿವರಗಳನ್ನು ಪಡೆದ ನಂತರ ಮುಂಬೈ ಕ್ರೈಂ ಬ್ರ್ಯಾಂಚ್ ಪುಣೆ ತಲುಪಿ ವಿದ್ಯಾರ್ಥಿಯನ್ನ ಉಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read