ಕಾಂಗ್ರೆಸ್ ಪಕ್ಷದ ನಾಯಕನ ನಾಲಿಗೆ ಕತ್ತರಿಸಿದವರಿಗೆ 10 ಲಕ್ಷ ರೂ. ಬಹುಮಾನ; ಬಿಜೆಪಿ ಮುಖಂಡನ ಘೋಷಣೆ

ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾಂಗ್ರೆಸ್ ಪಕ್ಷದ ನಾಯಕ ಜಿತೇಂದ್ರ ಅವ್ಹಾದ್ ಅವರ ನಾಲಿಗೆಯನ್ನು ಕತ್ತರಿಸಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡೋದಾಗಿ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಪದಾಧಿಕಾರಿಯೊಬ್ಬರು ಘೋಷಿಸಿದ್ದಾರೆ.

ಜೀತೇಂದ್ರ ಅವ್ಹಾದ್ ವಿರುದ್ಧ ಜಲ್ನಾದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಬಿಜೆಪಿಯ ಒಬಿಸಿ ಮೋರ್ಚಾ ಅಧ್ಯಕ್ಷ ಕಪಿಲ್ ದಹೇಕರ್ ಬಹುಮಾನ ಘೋಷಿಸಿದರು. ಆದರೆ ರಾಜ್ಯ ಬಿಜೆಪಿ , ಕಪಿಲ್ ಅವರ ಹೇಳಿಕೆಯನ್ನ ಬೆಂಬಲಿಸದೇ ಪಕ್ಷವು ಅಂತಹ ಹಿಂಸಾತ್ಮಕ ಪ್ರತಿಕ್ರಿಯೆಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದೆ.

ಮೊಘಲರನ್ನು ಇತಿಹಾಸದಿಂದ ಅಳಿಸಿಹಾಕುವ ಪ್ರಯತ್ನಗಳ ಕುರಿತು ಪ್ರತಿಕ್ರಿಯಿಸಿದ ಅವ್ಹಾದ್ ಅವರು ಇತ್ತೀಚೆಗೆ ಔರಂಗಜೇಬ್ ಮತ್ತು ಅಫ್ಜಲ್ ಖಾನ್ ಅವರಂತಹ ವಿರೋಧಿಗಳನ್ನು ಎದುರಿಸಿದ್ದರಿಂದ ಶಿವಾಜಿ ಮಹಾರಾಜರ ಹಿರಿಮೆ ಬೆಳಕಿಗೆ ಬಂದಿತು ಮತ್ತು ಮೊಘಲ್ ಇತಿಹಾಸವನ್ನು ತೆಗೆದುಹಾಕುವುದು ಅಪ್ರತಿಮ ಮರಾಠ ಚಕ್ರವರ್ತಿಯ ಸಾಧನೆಗಳನ್ನು ಅಪಮೌಲ್ಯಗೊಳಿಸುಸಿದಂತಾಗುತ್ತದೆ ಎಂದು ಹೇಳಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read