ಪತಿ ರವಿಚಂದರ್ ಜೊತೆಗಿನ ವಿರಸದ ವದಂತಿ ಬೆನ್ನಲ್ಲೇ ಗಮನ ಸೆಳೆದ ನಟಿ ಮಹಾಲಕ್ಷ್ಮಿ ಫೋಟೋ

ತಮಿಳು ಟಿವಿ ತಾರೆ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವಿಚಂದರ್ ಮದುವೆಯಾದಾಗಿನಿಂದ ಹಲವಾರು ಕಾರಣಗಳಿಗಾಗಿ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ಅವರ ಸಂಬಂಧದ ಕುರಿತ ಸುದ್ದಿ ವರದಿಗಳು ಮತ್ತು ಊಹಾಪೋಹಗಳು ಸದ್ದು ಮಾಡುತ್ತಿರುತ್ತವೆ.

ಇತ್ತೀಚೆಗೆ ಸಿಂಗಲ್ ಫೋಟೋ ಹಾಕಿದ್ದ ರವಿಚಂದರ್ ದುಃಖದ ಬಗ್ಗೆ ಸಾಲುಗಳನ್ನ ಬರೆದಿದ್ದರು. ಇವರ ದಾಂಪತ್ಯದಲ್ಲಿ ಬಿರುಕು ಮೂಡಿತಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಇದರ ಬೆನ್ನಲ್ಲೇ ನಟಿ ಮಹಾಲಕ್ಷ್ಮಿ ಅವರ ಪೋಸ್ಟ್ ಸಾಮಾಜಿಕ ಜಾಲತಾಣ ಬಳಕೆದಾರರ ಕಣ್ಣರಳಿಸಿದೆ.

ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಮಹಾಲಕ್ಷ್ಮಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಫೋಟೋದಲ್ಲಿ ಮಹಾಲಕ್ಷ್ಮಿ ಮತ್ತು ರವಿಚಂದರ್ ಪರಸ್ಪರ ಆತ್ಮೀಯವಾಗಿ ಪೋಸ್ ನೀಡಿದ್ದಾರೆ.

“ನೀವು ನನ್ನನ್ನು ನಿಮ್ಮ ತೋಳುಗಳಿಂದ ಆವರಿಸಿಕೊಂಡಾಗ, ಈ ಜಗತ್ತಿನಲ್ಲಿ ನಾನು ಮಾಡಲು ಸಾಧ್ಯವಾಗದ ಯಾವುದೂ ಇಲ್ಲ ಎಂದು ನೀವು ನನಗೆ ತಿಳಿಸುತ್ತೀರಿ. ನಾನು ನಿಮ್ಮನ್ನು ನನ್ನ ಹೃದಯ ಮತ್ತು ಆತ್ಮದಿಂದ ಪ್ರೀತಿಸುತ್ತೇನೆ ಅಮ್ಮು” ಎಂದು ಮಹಾಲಕ್ಷ್ಮಿ ಬರೆದಿದ್ದಾರೆ.

ಈ ಫೋಟೋ ನೋಡಿದ ಅಭಿಮಾನಿಗಳು ಕಾಮೆಂಟ್‌ಗಳ ವಿಭಾಗದಲ್ಲಿ ದಂಪತಿ ತಮ್ಮ ಜೀವನವನ್ನು ಆನಂದಿಸುತ್ತಿರುವುದನ್ನು ನೋಡಲು ಸಂತೋಷವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೀವಿಬ್ಬರೂ ಬೇರೆಯಾಗುತ್ತಿದ್ದೀರ ಎಂದು ಸುದ್ದಿ ವರದಿಯಾದ ಬೆನ್ನಲ್ಲೇ ನಾನು ನಿಮ್ಮಿಬ್ಬರ ಬಗ್ಗೆ ಚಿಂತಿತನಾಗಿದ್ದೆ. ಈಗ ಈ ಫೋಟೋ ನನಗೆ ಖುಷಿ ನೀಡಿದೆ ಎಂದು ಕಮೆಂಟ್ ಮಾಡಿದ್ದಾರೆ. ಇಬ್ಬರ ನಡುವೆ ವಿರಸ ಮೂಡಿದೆಯಾ ಎಂಬ ವದಂತಿ ಬೆನ್ನಲ್ಲೇ ಮಹಾಲಕ್ಷ್ಮಿ ಹಾಕಿರುವ ಫೋಟೋ ವದಂತಿಗಳಿಗೆ ಉತ್ತರ ನೀಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read