ಕರವಸ್ತ್ರಕ್ಕೆ ಬೆಂಕಿ ಹಚ್ಚಿ ಎಸೆದು ರೈಲಿನ ಸಹ ಪ್ರಯಾಣಿಕನನ್ನು ಗಾಯಗೊಳಿಸಿದ ವ್ಯಕ್ತಿ

ವಿಕಾಲಾಂಗ ವ್ಯಕ್ತಿಯೊಬ್ಬ ಸ್ಥಳೀಯ ರೈಲಿನಲ್ಲಿ ಸಹ ಪ್ರಯಾಣಿಕರೊಬ್ಬರ ಮೇಲೆ ಬೆಂಕಿ ಹಚ್ಚಿದ ಕರವಸ್ತ್ರ ಎಸೆದು ಸುಟ್ಟ ಗಾಯಗಳನ್ನು ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

ಶನಿವಾರ ರಾತ್ರಿ 10.45 ರ ಸುಮಾರಿಗೆ ಛತ್ರಪತಿ ಶಿವಾಜಿ ಟರ್ಮಿನಸ್‌ ನಿಂದ ಕಲ್ಯಾಣ್‌ಗೆ ತೆರಳುವ ಸ್ಥಳೀಯ ರೈಲಿನಲ್ಲಿ ದೈಹಿಕವಾಗಿ ಅಶಕ್ತ ವ್ಯಕ್ತಿಗಳ ವಿಭಾಗದಲ್ಲಿ ಈ ಘಟನೆ ನಡೆದಿದೆ ಎಂದು ಥಾಣೆ ಜಿಆರ್‌ಪಿಯ ಹಿರಿಯ ಇನ್ಸ್ ಪೆಕ್ಟರ್ ಪಂಢರಿ ಕಾಂಡೆ ತಿಳಿಸಿದ್ದಾರೆ.

ಆರೋಪಿ ಕೆಲವು ಮಾದಕ ವಸ್ತುವನ್ನು ಬಳಿದ ಕರವಸ್ತ್ರಕ್ಕೆ ಬೆಂಕಿ ಹಚ್ಚಿ ಸಂತ್ರಸ್ತ ಪ್ರಸಾದ ವಾಡೇಕರ್ (35) ಅವರ ಮೇಲೆ ಎಸೆದಿದ್ದಾರೆ ಎಂದು ಅವರು ಹೇಳಿದರು. ಸಂತ್ರಸ್ತರನ್ನು ಕೆಇಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 326 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ವಿಧಾನಗಳಿಂದ ಗಂಭೀರವಾದ ಗಾಯವನ್ನು ಉಂಟುಮಾಡುವುದು) ಅಡಿಯಲ್ಲಿ ಅಪರಾಧವನ್ನು ಆರೋಪಿಯ ವಿರುದ್ಧ ದಾಖಲಿಸಲಾಗಿದೆ. ಆದರೆ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಪತ್ತೆ ಕಾರ್ಯ ನಡೀತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read