ರೈತರಿಗೆ ಬಿಗ್ ಶಾಕ್: ಫಸಲ್ ಬಿಮಾ ಯೋಜನೆಯಡಿ ಕೇವಲ 3 ರೂ. ಪರಿಹಾರ

ಮುಂಬೈ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಪರಿಹಾರವಾಗಿ ರೈತರಿಗೆ ಕೇವಲ ರೂ.3 ಪಾವತಿಸಲಾಗಿದೆ. ಇನ್ನು ಕೆಲವು ರೈತರ ಖಾತೆಗೆ 21 ರೂಪಾಯಿ ಜಮಾ ಮಾಡಲಾಗಿದೆ.

ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಕೆಲವು ಗ್ರಾಮಗಳ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಪರಿಹಾರವಾಗಿ ಇಷ್ಟು ಕಡಿಮೆ ಮೊತ್ತ ನೀಡಲಾಗಿದೆ.

ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ದೀಪಾವಳಿಗೆ ಮುನ್ನ ಕೇಂದ್ರ ಸರ್ಕಾರ ವಿಮೆ ಪರಿಹಾರವಾಗಿ ಕೇವಲ ಮೂರು ರೂಪಾಯಿ ಪಾವತಿಸುವ ಮೂಲಕ ಅವಮಾನಿಸಿದೆ ಎಂದು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ತಮಗೆ ಬಂದಿರುವ ವಿಮೆ ಪರಿಹಾರದ ಹಣವನ್ನು ಚೆಕ್ ರೂಪದಲ್ಲಿ ಸರ್ಕಾರಕ್ಕೆ ಮರಳಿಸಿದ್ದಾರೆ. ಅಕೋಲಾ ಜಿಲ್ಲೆಯ ದಿನೋಡ, ಕಸವಾ, ಕುಠಾಸ ಗ್ರಾಮಗಳಲ್ಲಿ ಮಳೆಯಿಂದ ಬೆಳೆ ಸಂಪೂರ್ಣ ಹಾನಿಯಾಗಿದೆ. ಈ ಗ್ರಾಮಗಳಲ್ಲಿನ ರೈತರ ಖಾತೆಗಳಿಗೆ 3ರಿಂದ 21 ರೂಪಾಯಿ ಪರಿಹಾರ ಪಾವತಿಸಲಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೀಪಾವಳಿಗೆ ಮುನ್ನ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ(PMFBY) ಅಡಿಯಲ್ಲಿ ತಮಗೆ ದೊರೆತ ಅಲ್ಪ ಆರ್ಥಿಕ ನೆರವಿನ ಬಗ್ಗೆ ನಿರಾಶೆ ವ್ಯಕ್ತಪಡಿಸಿದ ರೈತರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ, ಚೆಕ್‌ಗಳ ಮೂಲಕ ಹಣವನ್ನು ಹಿಂದಿರುಗಿಸಿದರು.

ಇದು ಪರಿಹಾರವಲ್ಲ, ರೈತರನ್ನು ಅವಮಾನಿಸಲಾಗುತ್ತಿದೆ. ಸೆಪ್ಟೆಂಬರ್‌ನಲ್ಲಿ ಅತಿ ಹೆಚ್ಚು ಮಳೆಯಿಂದಾಗಿ ಅಕೋಲಾ ಜಿಲ್ಲೆಯಾದ್ಯಂತ ಸೋಯಾಬೀನ್, ಹತ್ತಿ ಮತ್ತು ಹೆಸರುಕಾಳು ಬೆಳೆಗಳು ವ್ಯಾಪಕ ಹಾನಿಯನ್ನು ಅನುಭವಿಸಿವೆ. ದೀಪಾವಳಿಗೆ ಮೊದಲು ಸಂತ್ರಸ್ತ ರೈತರಿಗೆ ಆರ್ಥಿಕ ಪರಿಹಾರ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಪರಿಹಾರ ಪ್ರಕ್ರಿಯೆಗಾಗಿ ಅವರು ತಮ್ಮ ಭೂ ದಾಖಲೆಗಳು, ಆಧಾರ್ ಮತ್ತು ಬ್ಯಾಂಕ್ ವಿವರಗಳು ಸೇರಿದಂತೆ ಎಲ್ಲಾ ಅಗತ್ಯ ದಾಖಲೆಗಳನ್ನು ಕಂದಾಯ ಅಧಿಕಾರಿಗಳಿಗೆ ಸಲ್ಲಿಸಿದ್ದರು. PMFBY ಅಡಿಯಲ್ಲಿ, ಪರಿಹಾರದ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ, ಆದರೆ ಜಮಾ ಮಾಡಿದ ಮೊತ್ತವು ರೂ 3 ರಿಂದ ರೂ 21.85 ರವರೆಗೆ ಇತ್ತು ಎಂದು ಅವರು ಹೇಳಿದ್ದಾರೆ.

ನಾವು ನಮ್ಮ ಎಲ್ಲಾ ಬೆಳೆಗಳನ್ನು ಕಳೆದುಕೊಂಡಿದ್ದೇವೆ ಮತ್ತು ಸರ್ಕಾರ ನಾವು ಇದನ್ನು ಹಣಕಾಸು ನೆರವು ಎಂದು ಸ್ವೀಕರಿಸಬೇಕೆಂದು ನಿರೀಕ್ಷಿಸುತ್ತದೆಯೇ? ಇದು ರೈತರಿಗೆ ಮಾಡಿದ ಅವಮಾನ” ಎಂದು ಡಿನೋಡಾ ಗ್ರಾಮದ ಕೃಷಿಕರೊಬ್ಬರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read