ಪಾನಮತ್ತ ವ್ಯಕ್ತಿಯಿಂದ ರೈಲಿನಲ್ಲಿ ಮಲಗಿದ್ದ ಮಹಿಳೆ ಮೇಲೆ ಮೂತ್ರ ವಿಸರ್ಜನೆ

ಮಧ್ಯಪ್ರದೇಶದ ಗೊಂಡ್ವಾನಾ ಎಕ್ಸ್ ಪ್ರೆಸ್‌ನಲ್ಲಿ ಮಹಿಳೆಯೊಬ್ಬರಿಗೆ ರೈಲು ಪ್ರಯಾಣ ದುಃಸ್ವಪ್ನವಾಗಿ ಕಾಡಿದೆ. ಕುಡಿದ ಅಮಲಿನಲ್ಲಿ ಯೋಧನೊಬ್ಬ ತಾನಿದ್ದ ಜಾಗದಲ್ಲೇ ಮೂತ್ರ ವಿಸರ್ಜಿಸಿದ್ದು ಅದು ಮಹಿಳೆಯ ಮೇಲೆ ಬಿದ್ದಿದೆ. ಎಸಿ ಕೋಚ್‌ನಲ್ಲಿ ಮಲಗಿದ್ದ ಮಹಿಳೆಗೆ ಈ ರೀತಿ ಕೆಟ್ಟ ಅನುಭವವಾಗಿದೆ.

ತನ್ನ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆ ಘಟನೆಯನ್ನು ವರದಿ ಮಾಡಿದ್ದರೂ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ. ಇದರಿಂದ ಬೇಸತ್ತ ಮಹಿಳೆ ಪ್ರಧಾನಿ ಕಚೇರಿ ಹಾಗೂ ರೈಲ್ವೆ ಸಚಿವರಿಗೆ ದೂರು ಸಲ್ಲಿಸಿದ್ದರು.

ಮಹಿಳೆ ಹಜರತ್ ನಿಜಾಮುದ್ದೀನ್‌ನಿಂದ ಛತ್ತೀಸ್‌ಗಢದ ದುರ್ಗ್‌ಗೆ ಗೊಂಡ್ವಾನಾ ಎಕ್ಸ್ ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಗ್ವಾಲಿಯರ್‌ಗೆ ಆಗಮಿಸುವ ಕೆಲ ಹೊತ್ತಿನ ಮೊದಲು ಈ ಘಟನೆ ನಡೆದಿದೆ.

ಕೆಳಗಿನ ಸೀಟ್ ನಲ್ಲಿ ಬಿ-9 ಕೋಚ್‌ನಲ್ಲಿ ತನ್ನ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆ ಮೇಲಿನ ಸೀಟ್ ನಲ್ಲಿದ್ದ ಯೋಧ ಮೂತ್ರ ವಿಸರ್ಜನೆ ಮಾಡಿದ್ದರಿಂದ ಅಹಿತಕರ ಪರಿಸ್ಥಿತಿ ನಿರ್ಮಾಣವಾಯಿತು. ತಕ್ಷಣ ಮಹಿಳೆಯ ಪತಿ ರೈಲ್ವೆ ಸಹಾಯವಾಣಿಗೆ ದೂರು ಸಲ್ಲಿಸಿದರು.

ಗ್ವಾಲಿಯರ್ ಮತ್ತು ಝಾನ್ಸಿಯಲ್ಲಿ ರೈಲ್ವೇ ಸಂರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿಗೆ ಮಾಹಿತಿ ನೀಡಿದರೂ, ಯೋಧನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಆತ ಕುಡಿದು ಮೂತ್ರ ವಿಸರ್ಜಿಸಿದ್ದು ಆತನ ಪ್ಯಾಂಟ್ ತೇವವಾಗಿತ್ತು. ಆದರೂ ನಮ್ಮ ದೂರಿಗೆ ಸರಿಯಾದ ಕ್ರಮ ಕೈಗೊಳ್ಳದ ಕಾರಣ ಪ್ರಧಾನಿ ಕಾರ್ಯಾಲಯ ಮತ್ತು ರೈಲ್ವೆ ಸಚಿವರಿಗೆ ಆನ್‌ಲೈನ್‌ನಲ್ಲಿ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಆರ್‌ಪಿಎಫ್ ಅಧಿಕಾರಿಗಳು ಮಹಿಳೆ ದೂರಿಗೆ ಪ್ರತಿಕ್ರಿಯಿಸಿ, ಮಹಿಳೆಯನ್ನು ಆಕೆಯ ಸೀಟಿನಲ್ಲಿ ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಸೈನಿಕನು ಅಮಲೇರಿದ ಮತ್ತಲ್ಲಿ ಮಲಗಿದ್ದನ್ನು ಕಂಡಿದ್ದಾಗಿ ವರದಿ ಮಾಡಿದರು.

ಇದೇ ರೀತಿಯ ಘಟನೆಯಲ್ಲಿ ಕುಡುಕ ಪ್ರಯಾಣಿಕನೊಬ್ಬ ಉತ್ತರ ಪ್ರದೇಶದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಸಂಪರ್ಕ ಕ್ರಾಂತಿ ಎಕ್ಸ್ ಪ್ರೆಸ್‌ನಲ್ಲಿ ತನ್ನ ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಉತ್ತರ ಮಧ್ಯ ರೈಲ್ವೆಯ ವಕ್ತಾರರು ಮಾತನಾಡಿ, ವಯಸ್ಸಾದ ದಂಪತಿ ಕೆಳಗಿನ ಸೀಟ್ ನಲ್ಲಿ ಕುಳಿತಿದ್ದರು. ಆರೋಪಿ ರಿತೇಶ್ ಕುಡಿದು ಆಕಸ್ಮಿಕವಾಗಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಮೂತ್ರದ ಹನಿಗಳು ದಂಪತಿ ಮೇಲೆ ಬಿದ್ದಿದೆ. ರೈಲ್ವೇ ಕಾಯಿದೆಯ ಸೆಕ್ಷನ್ 145 ರ ಅಡಿಯಲ್ಲಿ ರಿತೇಶ್ ವಿರುದ್ಧ ಆರೋಪ ಹೊರಿಸಲಾಗಿದೆ ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read