ಸಮಯಪ್ರಜ್ಞೆ ಮೆರೆದು ರೋಗಿಯ ಪ್ರಾಣ ಉಳಿಸಿದ ಲೇಡಿ ಸಬ್ ಇನ್ಸ್‌ಪೆಕ್ಟರ್

ಗ್ವಾಲಿಯರ್ (ಮಧ್ಯಪ್ರದೇಶ): ಗ್ವಾಲಿಯರ್‌ನಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬನನ್ನು ಆಂಬ್ಯುಲೆನ್ಸ್‌ಗಾಗಿ ಕಾಯುವ ಬದಲು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ದ ಟ್ರಾಫಿಕ್ ಪೊಲೀಸರು ಆತನ ಜೀವ ಉಳಿಸಿದ್ದಾರೆ.

ಮಾಹಿತಿಯ ಪ್ರಕಾರ, ಟ್ರಾಫಿಕ್ ಸಬ್ ಇನ್ಸ್‌ಪೆಕ್ಟರ್ ಸೋನಮ್ ಪರಾಶರ್ ತಡರಾತ್ರಿ ಮನೆಗೆ ಹಿಂದಿರುಗುತ್ತಿದ್ದಾಗ, ನಗರದ ಜಂಕ್ಷನ್ ಬಳಿ ಜನಸಂದಣಿಯನ್ನು ಗಮನಿಸಿದರು. ವಾಹನ ನಿಲ್ಲಿಸಿ ಪರಿಸ್ಥಿತಿಯನ್ನು ವಿಚಾರಿಸಿದರು. ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬನಿಗೆ ತಲೆಗೆ ತೀವ್ರ ಪೆಟ್ಟಾಗಿರುವುದನ್ನು ನೋಡಿದ ಪರಾಶರ್ ತಕ್ಷಣ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿ, ಆಂಬ್ಯುಲೆನ್ಸ್‌ಗೆ ಮನವಿ ಮಾಡಿದರು.

ಆಂಬ್ಯುಲೆನ್ಸ್‌ ಬರಲು ಸ್ವಲ್ಪ ಸಮಯ ಹಿಡಿಯಿತು, ಆಕೆ ತನ್ನ ಸಹೋದ್ಯೋಗಿಗಳೊಂದಿಗೆ ರೋಗಿಯನ್ನು ತನ್ನ ಸ್ವಂತ ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಆಸ್ಪತ್ರೆಯ ಕೌಂಟರ್‌ನಲ್ಲಿ ತಾವೇ ಖುದ್ದು ದಾಖಲೆಗಳಿಗೆ ಸಹಿ ಮಾಡಿದರು. ಸಮಯೋಚಿತ ಚಿಕಿತ್ಸೆ ವ್ಯಕ್ತಿಯ ಜೀವ ಉಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read