ಬೆಚ್ಚಿಬೀಳಿಸುವಂತಿದೆ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಭೀಕರ ಅಪಘಾತದ ದೃಶ್ಯ

ವೇಗವಾಗಿ ಬಂದ ಕಾರ್ , ಮಲ್ಟಿ ಆಕ್ಸಲ್ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಕಾರಿನಲ್ಲೇ ಮೃತಪಟ್ಟಿರೋ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಡಿಕ್ಕಿ ಹೊಡೆದ ಕಾರನ್ನು ಟ್ರಕ್ 100 ಮೀಟರ್ ವರೆಗೆ ಎಳೆದೊಯ್ದಿದೆ. ಮೃತ ಪಟ್ಟವರನ್ನು ಸರ್ದಾರ್‌ಪುರ ಸ್ಮಶಾನದಲ್ಲಿ ಒಟ್ಟಿಗೆ ಅಂತ್ಯಸಂಸ್ಕಾರ ಮಾಡಿದ್ದು ಧಾರ್ ಜಿಲ್ಲೆಯ ಸರ್ದಾರ್‌ಪುರ ತಹಸಿಲ್‌ನಲ್ಲಿ ಸ್ಮಶಾನ ಮೌನ ಆವರಿಸಿದೆ.

ಸರ್ದಾರ್‌ಪುರ ಮುನ್ಸಿಪಲ್ ಕೌನ್ಸಿಲ್‌ನ ವಾರ್ಡ್ ನಂ 7ರ ಕೌನ್ಸಿಲರ್ ಪ್ರಥಮ್ (27), ಸರ್ದಾರ್‌ಪುರ ನಿವಾಸಿಗಳಾದ ಅಕ್ಷಯ್ (27) ಮತ್ತು ರಾಜ್‌ಗಢ್‌ನ ದಲ್ಪುರ ಗ್ರಾಮದ ನಿವಾಸಿ ಸಂದೀಪ್ (28) ಅವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಂಗಳವಾರ ಮುಂಜಾನೆ ಧಾರ್ ಜಿಲ್ಲೆಯ ಇಂದೋರ್-ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಕಾರ್ ಮಲ್ಟಿ ಆಕ್ಸಲ್-ಟ್ರಕ್‌ಗೆ ಡಿಕ್ಕಿ ಹೊಡೆದಿತ್ತು.

ಅಪಘಾತದ ಒಂದು ದಿನದ ನಂತರ ದುರಂತ ಘಟನೆಯ ವೀಡಿಯೊ ತುಣುಕು ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಿದ್ದು, ಘಟನೆ ವೇಳೆ ಮಲ್ಟಿ-ಆಕ್ಸಲ್-ಟ್ರಕ್ ಕಾರನ್ನು 100 ಮೀಟರ್ ವರೆಗೆ ಎಳೆದೊಯ್ದಿದೆ.

ಮಂಗಳವಾರ ಮುಂಜಾನೆ 3.33ಕ್ಕೆ ಗಂಟೆಗೆ ಸುಮಾರು 120 ಕಿಲೋಮೀಟರ್‌ ವೇಗದಲ್ಲಿ ಚಲಿಸುತ್ತಿದ್ದ ಸ್ವಿಫ್ಟ್‌ ಕಾರು ಸ್ಪೀಡ್‌ ಬ್ರೇಕರ್‌ ದಾಟುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿರುವುದು ಸಿಸಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

ಡಿಕ್ಕಿಯ ನಂತರ ಟ್ರಕ್‌ನ ವೇಗ ಕಡಿಮೆಯಾದರೂ, ಅದು ಕಾರನ್ನು 50 ಅಡಿಗಳವರೆಗೆ ಎಳೆದೊಯ್ದಿದೆ.
ಅದೇ ಕ್ಷಣದಲ್ಲಿ ಹತ್ತಿರದ ಪೊಲೀಸ್ ವಾಹನದಲ್ಲಿ ಕುಳಿತಿದ್ದ ಪೊಲೀಸ್ ಪೇದೆಯೊಬ್ಬರು ಕಾರಿನಲ್ಲಿ ಇನ್ನೂ ಯಾರಾದರೂ ಜೀವಂತವಾಗಿದ್ದಾರಾ ಎಂದು ನಿರೀಕ್ಷಿಸುತ್ತಾ ಟ್ರಕ್ ಅನ್ನು ಹಿಂಬಾಲಿಸಿದ್ದಾರೆ.

ಈ ಹೃದಯ ವಿದ್ರಾವಕ ಘಟನೆಯ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಬೆಚ್ಚಿಬೀಳಿಸಿದೆ.

https://twitter.com/FreePressMP/status/1648669672223694848?ref_src=twsrc%5Etfw%7Ctwcamp%5Etweetembed%7Ctwterm%5E1648669672223694848%7Ctwgr%5E4dcb93572c70d7303936077a34752141304e4e1a%7Ctwcon%5Es1_&ref_url=https%3A%2F%2Fwww.freepressjournal.in%2Findore%2Fmadhya-pradesh-car-rams-into-a-truck-on-indore-ahmedabad-national-highway-gets-dragged-for-nearly-100-meters-killing-3

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read