8 ನೇ ತರಗತಿ​ ವಿದ್ಯಾರ್ಥಿನಿ ಮೇಲೆ 35 ವರ್ಷದವನಿಗೆ ಪ್ರೀತಿ: ನಿರಾಕರಿಸಿದ್ದಕ್ಕೆ ಶಿಕ್ಷಕರ ಮೇಲೆ ಗುಂಡು ಹಾರಿಸಿದ ಆರೋಪಿ

ಮೊರೆನಾ (ಮಧ್ಯಪ್ರದೇಶ): 8ನೇ ತರಗತಿ ವಿದ್ಯಾರ್ಥಿನಿಯನ್ನು ಪ್ರೀತಿಸಿದ 35 ವರ್ಷದ ವ್ಯಕ್ತಿಯೊಬ್ಬ ಆಕೆ ನಿರಾಕರಿಸಿದ್ದಕ್ಕೆ, ಶಾಲೆಗೆ ನುಗ್ಗಿ ಶಿಕ್ಷಕನ ಮೇಲೆ ಗುಂಡು ಹಾರಿಸಿದ ಘಟನೆ ಮೊರೆನಾದಲ್ಲಿ ನಡೆದಿದೆ. ಅದಕ್ಕೂ ಕೆಲವೇ ಗಂಟೆಗಳ ಹಿಂದೆ ಆರೋಪಿಗಳು ಆಕೆಯ 8 ವರ್ಷದ ಸಹೋದರನಿಗೆ ಗುಂಡು ಹಾರಿಸಿದ್ದರು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಒಂದೇ ದಿನ ಎರಡು ವಿಭಿನ್ನ ಪ್ರದೇಶಗಳಲ್ಲಿ ಎರಡು ಘಟನೆಗಳು ನಡೆದಿವೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಯೋಗೇಂದ್ರ ಸಿಂಗ್ ಜಾದೂನ್ ತಿಳಿಸಿದ್ದಾರೆ.

ರೈಲ್ವೇ ನಿಲ್ದಾಣದ ಬಳಿ ಮೊದಲ ಘಟನೆ ನಡೆದಿದ್ದು, ಆರೋಪಿಗಳು ಎಂಟು ವರ್ಷದ ಬಾಲಕನಿಗೆ ದೇಶಿ ನಿರ್ಮಿತ ಗನ್‌ನಿಂದ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಧ್ಯಾಹ್ನ 3.30ರ ಸುಮಾರಿಗೆ ಈ ಘಟನೆ ನಡೆದಿದೆ. ದಾರಿಹೋಕರು ಅವನನ್ನು ಚಿಕಿತ್ಸೆಗಾಗಿ ಕರೆದೊಯ್ದಿದ್ದರು.

ಒಂದು ಗಂಟೆಯ ನಂತರ ಇನ್ನೊಂದು ಪ್ರದೇಶದಲ್ಲಿ ಆರೋಪಿಗಳು ಬಾಲಕಿಯ ಶಾಲೆಗೆ ಆಗಮಿಸಿ ಶಿಕ್ಷಕ ಹರಿಚಂದ್ರ ಶರ್ಮಾ ಅವರನ್ನು ತರಗತಿಯಿಂದ ಕರೆದಿದ್ದಾರೆ, ನಂತರ ಹುಡುಗಿಗೆ ಯಾಕೆ ಅವಮಾನ ಮಾಡಿದ್ದೀಯಾ ಎಂದು ಹೇಳಿ ಗುಂಡು ಹಾರಿಸಿದ್ದಾನೆ. ಶಿಕ್ಷಕರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read