80 ಲಕ್ಷಕ್ಕಿಂತ ಕಡಿಮೆ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಗಳಿಸಿತ್ತು 5 ಕೋಟಿ; ಚಿತ್ರದ ಹಾಡುಗಳು ಇಂದಿಗೂ ಫೇಮಸ್‌…..!

ಇತ್ತೀಚಿನ ದಿನಗಳಲ್ಲಿ ಸಿನೆಮಾಗಳು 100 ಕೋಟಿ ಕ್ಲಬ್‌ ಸೇರುವುದು ಸಾಮಾನ್ಯವಾಗಿಬಿಟ್ಟಿದೆ. ಅನೇಕ ಚಿತ್ರಗಳು 100 ಕೋಟಿಗೂ ಹೆಚ್ಚು ಕಲೆಕ್ಷನ್‌ ಮಾಡಿವೆ. ಆದರೆ 90ರ ದಶಕದಲ್ಲಿ ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಚಿತ್ರವೊಂದು ಭರ್ಜರಿ ಕಲೆಕ್ಷನ್‌ ಮಾಡಿತ್ತು. ವಿಶೇಷ ಅಂದ್ರೆ ಆ ಸಿನೆಮಾದ ಹಾಡುಗಳು ಈಗಲೂ ಫೇಮಸ್‌ ಆಗಿವೆ.

ನಟ ರಾಹುಲ್ ರಾಯ್ ಅಭಿನಯದ ‘ಆಶಿಕಿ’ ಆ ಸಮಯದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಅನು ಅಗರ್ವಾಲ್ ಈ ಚಿತ್ರದಲ್ಲಿ ರಾಹುಲ್‌ ರಾಯ್‌ಗೆ ಜೋಡಿಯಾಗಿದ್ದರು. ಆ ಸಮಯದಲ್ಲಿ ಆಶಿಕಿ ಬ್ಲಾಕ್ ಬಸ್ಟರ್ ಸಿನೆಮಾ ಆಗಿತ್ತು. ಆ ಸಮಯದಲ್ಲಿ ಅಭಿಮಾನಿಗಳ ಕ್ರೇಝ್‌ ಎಷ್ಟಿತ್ತೆಂದರೆ ಚಿತ್ರದಲ್ಲಿ ರಾಹುಲ್‌ ರಾಯ್‌ ಎಂಟ್ರಿಯಾಗ್ತಿದ್ದಂತೆ ಪ್ರೇಕ್ಷಕರು ಪರದೆಯತ್ತ ಹಣ ಎಸೆದಿದ್ದರಂತೆ. ರಾಹುಲ್ ರಾಯ್ ಸಂದರ್ಶನವೊಂದರಲ್ಲಿ ಈ ವಿಚಾರ ಬಹಿರಂಗಪಡಿಸಿದ್ದರು. ಕಡಿಮೆ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಗಳಿಕೆ ಮಾಡಿತ್ತು.

ಆಶಿಕಿ ಚಿತ್ರದ ಮೂಲಕ ರಾಹುಲ್ ರಾಯ್ ರಾತ್ರೋರಾತ್ರಿ ಸೂಪರ್ ಸ್ಟಾರ್ ಆದರು. ವಿಶೇಷ ಅಂದ್ರೆ 80 ಲಕ್ಷಕ್ಕಿಂತ ಕಡಿಮೆ ಬಜೆಟ್‌ನಲ್ಲಿ ತಯಾರಾದ ಸಿನೆಮಾ ಇದು. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 5 ಕೋಟಿ ಗಳಿಸಿದೆ. ಸುಮಾರು 6 ತಿಂಗಳುಗಳ ಕಾಲ ಆಶಿಕಿ ಚಿತ್ರದ ಪ್ರದರ್ಶನಗಳೆಲ್ಲ ಹೌಸ್‌ಫುಲ್ ಆಗಿದ್ದವು. ಅಚ್ಚರಿಯ ಸಂಗತಿ ಎಂದರೆ ‘ಆಶಿಕಿ’ ಚಿತ್ರಕ್ಕಾಗಿ ರಾಹುಲ್‌ ರಾಯ್‌ 30,000 ರೂಪಾಯಿ ಸಂಭಾವನೆ ಪಡೆದಿದ್ದರಂತೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read