HDK ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ; ಕೆಪಿಸಿಸಿ ವಕ್ತಾರ ಎಚ್ಚರಿಕೆ

ಮೈಸೂರು: ಮಾಜಿ ಸಿಎಂ ಹೆಚ್.ಡಿ.ಕುಮರಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಮತನಾಡಿದ ಎಂ.ಲಕ್ಷ್ಮಣ್, ಸಿಎಂ ಸಿದ್ದರಾಮಯ್ಯನವರಿಗೆ ಸಚಿವರೊಬ್ಬರು 1 ಕೋಟಿ 90 ಲಕ್ಷ ರೂಪಾಯಿ ಬೆಲೆಬಾಳುವ ವಿದೇಶಿ ಸೋಫಾ ಸೆಟ್ ಗಿಫ್ಟ್ ಮಾಡಿದ್ದಾರೆ ಎಂದು ಕೆಲ ದಿನಗಳ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದರು. ಈ ಆರೋಪಕ್ಕೆ ಕುಮಾರಸ್ವಾಮಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಹೇಳಿದ್ದಾರೆ.

ಹೆಚ್.ಡಿ.ಕೆ. ಈ ರೀತಿ ಲೋ ಲೆವಲ್ ರಾಜಕೀಯ ಮಾಡುತ್ತಾರೆ ಎಂದು ಕೊಂಡಿರಲಿಲ್ಲ. 1 ಕೋಟಿ 90 ಲಕ್ಷ ಮೌಲ್ಯದ ಸೋಫಾ ಸಚಿವರು ಗಿಫ್ಟ್ ಕೊಟ್ಟ ಬಗ್ಗೆ ದಾಖಲೆಗಳಿದ್ದರೆ ಕುಮಾರಸ್ವಾಮಿಯವರು ತೋರಿಸಲಿ. ಸೋಫಾ ಏನು ಚಿನ್ನದ್ದಾ? ಅತಿ ಹೆಚ್ಚು ಬೆಲೆ ಬಾಳುವ ಸೋಫಾ ಅಂದ್ರೆ 4 ಲಕ್ಷದ 68 ಸಾವಿರ ರೂಪಾಯಿ. ಆದರೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಮಾನನಷ್ಟ ಮೊಕದ್ದಮೆ ಹೂಡುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.

ಎರಡು ಸೋಫಾ ಸೆಟ್ ಸಿಎಂ ಅಧಿಕೃತ ನಿವಾಸಕ್ಕೆ ಕೊಡಲಾಗಿದೆ. ಅದರ ಬೆಲೆ 72,250 ರೂ ಹಾಗೂ 1,27,850 ರೂನದ್ದು. ಪ್ರಭಾವಿ ಸಚಿವರೊಬ್ಬರು ಕೋಟಿಗೂ ಅಧಿಕ ಮೌಲ್ಯದ ಗಿಫ್ಟ್ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳ ವಿರುದ್ಧ ಹಗುರವಾಗಿ ಮಾತನಾಡುವುದು ಮಾಜಿ ಸಿಎಂಗೆ ಶೋಭೆ ತರಲ್ಲ ಎಂದು ವಾಗ್ದಾಳಿ ನಡೆಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read