ಲೂಡೋ ಆಡುವಾಗಲೇ ಮೊಳಕೆಯೊಡೆದಿತ್ತು ಪ್ರೀತಿ…! ಮದುವೆಯಾಗಲು ಭಾರತಕ್ಕೆ ಬಂದು ಸಿಕ್ಕಿಬಿದ್ದ ಪಾಕ್ ಯುವತಿ

ಬೆಂಗಳೂರಿನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಪಾಕ್ ಯುವತಿ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈಕೆ ಆನ್ಲೈನ್ ಲೂಡೋ ಗೇಮ್ ಆಡುವಾಗ ಉತ್ತರ ಪ್ರದೇಶದ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದು, ಆತನೊಂದಿಗೆ ಮದುವೆಯಾಗುವ ಸಲುವಾಗಿ ನೇಪಾಳದ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಿರುವುದು ಈಗ ಬಹಿರಂಗವಾಗಿದೆ.

ಬಳಿಕ ಪಾಕ್ ಯುವತಿಗೆ ನಕಲಿ ದಾಖಲೆ ಸೃಷ್ಟಿಸಿ ಉತ್ತರ ಪ್ರದೇಶದ ಯುವಕ ಆಕೆಯೊಂದಿಗೆ ಮದುವೆಯಾಗಿದ್ದು, ಇಬ್ಬರೂ ಬೆಂಗಳೂರಿನಲ್ಲಿ ನೆಲೆಸಿದ್ದರು ಎಂದು ತಿಳಿದು ಬಂದಿದೆ. ಆದರೆ ಇವರುಗಳ ಅದೃಷ್ಟ ಕೈ ಕೊಟ್ಟಿದ್ದು ತಮಗೆ ದೊರೆತ ಸುಳಿವಿನ ಮೇರೆಗೆ ಪೊಲೀಸರು ಈಗ ಇಬ್ಬರನ್ನೂ ಬಂಧಿಸಿದ್ದಾರೆ.

ಪಾಕಿಸ್ತಾನದ ಯುವತಿ ಅಕ್ರಮವಾಗಿ ಭಾರತ ಪ್ರವೇಶಿಸಿರುವ ಕುರಿತಂತೆ ಈಗ ಪ್ರಕರಣ ದಾಖಲಾಗಿದ್ದು, ಜೊತೆಗೆ ಈಕೆಗೆ ನಕಲಿ ದಾಖಲೆ ಸೃಷ್ಟಿಸಲು ನೆರವಾದ ಸಂಬಂಧ ಉತ್ತರ ಪ್ರದೇಶದ ಯುವಕನೂ ಸಹ ಬಂಧನಕ್ಕೊಳಗಾಗಿದ್ದಾನೆ. ಇವರಿಬ್ಬರ ಲೂಡೋ ಗೇಮ್ ಹುಚ್ಚು ಈಗ ಜೈಲು ಕಂಬಿ ಎಣಿಸುವಂತೆ ಮಾಡಿದೆ.

https://twitter.com/priyarajputlive/status/1617397197049585665?ref_src=twsrc%5Etfw%7Ctwcamp%5Etweetembed%7Ctwterm%5E1617397197049585665%7Ctwgr%5E9b2abddd2a5db760e4c789125eabbd915657bcf4%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-lateng%2Fludogameaffairpakistanigirlfallsinlovewithuttarpradeshboywhileplayingboardgameonlinecrossesbordertomeethimbotharrested-newsid-n464659772%3Fs%3Dauu%3D0x61fbe37283098391ss%3Dwspsm%3DY

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read