ಬಾಲಕನಿಂದ ಪೈಶಾಚಿಕ ಕೃತ್ಯ: ಅತ್ಯಾಚಾರ ಎಸಗಿ ಸುತ್ತಿಗೆಯಿಂದ ಹೊಡೆದು ಬಾಲಕಿ ಕೊಲೆ: ಶವಕ್ಕೆ ನೇಣು ಬಿಗಿದು ಪರಾರಿ

ಲಕ್ನೋದ ಇಂದಿರಾ ನಗರದಲ್ಲಿ ಗುರುವಾರ ಬಾಲಕನೊಬ್ಬ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಮಧ್ಯಾಹ್ನ 1 ರಿಂದ 1:30 ರ ನಡುವೆ ತಕ್ರೋಹಿಯಲ್ಲಿರುವ ಸಂತ್ರಸ್ತೆಯ ಮನೆಗೆ ಆರೋಪಿ ನುಗ್ಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. ಮನೆಯಿಂದ ಪರಾರಿಯಾಗುವ ಮೊದಲು, ಆಕೆಯ ದೇಹವನ್ನು ಆಕೆಯ ಕೋಣೆಯಲ್ಲಿ ಫ್ಯಾನ್‌ ಗೆ ನೇಣು ಹಾಕಿದ್ದಾನೆ. ಆರೋಪಿಯನ್ನು ಶಾಹಿದ್ ಎಂದು ಗುರುತಿಸಲಾಗಿದ್ದು, ಆತನಿಗೆ ಸಂತ್ರಸ್ತೆಯೊಂದಿಗೆ ಸಂಬಂಧವಿತ್ತೆ ಅಥವಾ ಕೊಲೆಯ ಉದ್ದೇಶವೇನು ಎಂಬುದು ಇನ್ನೂ ಖಚಿತವಾಗಿಲ್ಲ.

ಸಂತ್ರಸ್ತೆಯ ಪೋಷಕರು ಜೀವನೋಪಾಯಕ್ಕಾಗಿ ಬಟ್ಟೆಗಳನ್ನು ಇಸ್ತ್ರಿ ಮಾಡುತ್ತಾರೆ. ಸಂತ್ರಸ್ತೆಯ ತಂದೆ, ನನ್ನ ಹೆಂಡತಿ ಮನೆಗೆ ಹಿಂತಿರುಗಿ ಬಂದು ವರಾಂಡಾದಲ್ಲಿ ನಿಂತಿದ್ದ ಶಾಹಿದ್ ನನ್ನು ಕಂಡು ಹಿಡಿಯಲು ಪ್ರಯತ್ನಿಸಿದಾಗ, ಅವನು ಅವಳನ್ನು ತಳ್ಳಿ ಓಡಿಹೋದನು ಎಂದು ಹೇಳಿದರು.

ತಲೆಗೆ ಪೆಟ್ಟಾಗಿ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read