ಹೊಸ ವರ್ಷದ ಮೊದಲ ದಿನವೇ ದೇಶದ ಜನತೆಗೆ ಶಾಕ್: LPG ದರ ಏರಿಕೆ: ಸಿಲಿಂಡರ್ ಗೆ 25 ರೂ. ಹೆಚ್ಚಳ

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು(ಒಎಂಸಿ) 2023ರ ಹೊಸ ವರ್ಷದ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿವೆ.

ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 25 ರೂ.ವರೆಗೆ ಹೆಚ್ಚಿಸಲಾಗಿದೆ. ಗೃಹಬಳಕೆಯ ಸಿಲಿಂಡರ್‌ ಗಳ ದರಗಳನ್ನು ಬದಲಾಯಿಸಲಾಗಿಲ್ಲ.

ವಾಣಿಜ್ಯ LPG ಸಿಲಿಂಡರ್ ಹೆಚ್ಚಳ:

OMC ಗಳು ಜನವರಿ 1, 2023 ರಿಂದ ವಾಣಿಜ್ಯ ಸಿಲಿಂಡರ್‌ಗಳ ದರವನ್ನು 25 ರೂ.ವರೆಗೆ ಹೆಚ್ಚಿಸುವ ಮೂಲಕ ಬದಲಾಯಿಸಿವೆ. ಈ ಕ್ರಮವು ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಇತ್ಯಾದಿಗಳಲ್ಲಿ ಊಟ, ತಿಂಡಿ ದರ ದುಬಾರಿಯಾಗಿಸುತ್ತದೆ.

ಮಹಾನಗರಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ

ದೆಹಲಿ – 1768 ರೂ.

ಮುಂಬೈ – 1721 ರೂ.

ಕೋಲ್ಕತ್ತಾ – 1870 ರೂ.

ಚೆನ್ನೈ – 1917 ರೂ.

ಮಹಾನಗರಗಳಲ್ಲಿ ಗೃಹಬಳಕೆಯ LPG ಸಿಲಿಂಡರ್ ದರ

ದೆಹಲಿ – 1053 ರೂ

ಮುಂಬೈ – 1052.5 ರೂ

ಕೋಲ್ಕತ್ತಾ – 1079 ರೂ

ಚೆನ್ನೈ – 1068.5 ರೂ

ಕಳೆದ ಒಂದು ವರ್ಷದಲ್ಲಿ ಸಿಲಿಂಡರ್ ಬೆಲೆ 153.5 ರೂ

ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ನ ಅಂದರೆ 14.2 ಕೆಜಿ ಸಿಲಿಂಡರ್‌ನ ಬೆಲೆಯಲ್ಲಿ ಕೊನೆಯ ಬದಲಾವಣೆಯನ್ನು 6 ಜುಲೈ 2022 ರಂದು ಮಾಡಲಾಗಿದೆ. ಕಳೆದ ಒಂದು ವರ್ಷದಲ್ಲಿ, ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳು 153.5 ರೂಪಾಯಿಗಳಷ್ಟು ಹೆಚ್ಚಾಗಿದೆ.

ಕಳೆದ ಬಾರಿ ಜುಲೈ 6 2022 ರಲ್ಲಿ ದೇಶೀಯ ಸಿಲಿಂಡರ್‌ ಬೆಲೆ ಹೆಚ್ಚಿಸಿವೆ. ನಾಲ್ಕು ಬಾರಿ ಬೆಲೆ ಏರಿಕೆಯಾಗಿದೆ. OMC ಗಳು ಮೊದಲು ಮಾರ್ಚ್ 2022 ರಲ್ಲಿ 50 ರೂ. ಹೆಚ್ಚಿಸಿದವು. ನಂತರ ಅದು ಮತ್ತೆ 50 ರೂ.ಮತ್ತು 3.50 ರೂ. ಮೇ ತಿಂಗಳಲ್ಲಿ ಹೆಚ್ಚಿಸಿತು. ಅಂತಿಮವಾಗಿ, ಕಳೆದ ವರ್ಷ ಜುಲೈನಲ್ಲಿ ದೇಶೀಯ ಸಿಲಿಂಡರ್ ಬೆಲೆಯನ್ನು 50 ರೂ.ಹೆಚ್ಚಳ ಮಾಡಲಾಗಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read