LPG ಸಿಲಿಂಡರ್ ದರ ಪರಿಷ್ಕರಣೆ: ವಾಣಿಜ್ಯ ಸಿಲಿಂಡರ್ ದರ 92 ರೂ. ಕಡಿತ

ನವದೆಹಲಿ: ಇಂದು 2024 ರ ಆರ್ಥಿಕ ವರ್ಷದ ಮೊದಲ ದಿನವಾಗಿದೆ. ಸರ್ಕಾರವು LPG ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು ಪರಿಷ್ಕರಿಸಿದೆ. ಏಪ್ರಿಲ್ 1 ರಂದು ಅಡುಗೆ ಅನಿಲದ ಬೆಲೆಯನ್ನು ಸುಮಾರು 92 ರೂ.ನಷ್ಟು ಕಡಿತಗೊಳಿಸಲಾಗಿದೆ. ಆದರೆ, ವಾಣಿಜ್ಯ ಅನಿಲ ಸಿಲಿಂಡರ್ ಬಳಕೆದಾರರಿಗೆ ಮಾತ್ರ ದರ ಇಳಿಕೆಯಾಗಿದೆ. ದೇಶೀಯ ಎಲ್‌ಪಿಜಿ ಗ್ಯಾಸ್ ಗ್ರಾಹಕರಿಗೆ ಬೆಲೆ ಪರಿಷ್ಕರಣೆಯಾಗಿಲ್ಲ. 14.2 ಕೆಜಿ ಗ್ಯಾಸ್ ಸಿಲಿಂಡರ್‌ಗಳ ದರ ಕಳೆದ ತಿಂಗಳಿನಂತೆಯೇ ಇದೆ. ಕಳೆದ ತಿಂಗಳು ಕೇಂದ್ರವು ಗೃಹಬಳಕೆಯ ಅಡುಗೆ ಅನಿಲದ ಬೆಲೆಯನ್ನು 50 ರೂ. ಹೆಚ್ಚಿಸಿತ್ತು.

ಮಾರ್ಚ್‌ನಲ್ಲಿ ಸರ್ಕಾರವು ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು 350 ರೂ. ಹೆಚ್ಚಿಸಿತ್ತು ಮತ್ತು ಈಗ 92 ರೂ. ಇಳಿಕೆಯಾಗಿದೆ.

ಇಂಡೇನ್ ಗ್ಯಾಸ್ ಸಿಲಿಂಡರ್ ಬೆಲೆಗಳು (19 ಕೆಜಿ ಸಿಲಿಂಡರ್):

ದೆಹಲಿ: 2028 ರೂ.

ಕೋಲ್ಕತ್ತಾ: 2132 ರೂ.

ಮುಂಬೈ: 1980 ರೂ.

ಚೆನ್ನೈ: 2192.50 ರೂ.

ದೇಶೀಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳು

ದೆಹಲಿ: 1,103 ರೂ.

ಬೆಂಗಳೂರು: 1115.5 ರೂ.

ಮುಂಬೈ: 1112.5 ರೂ.

ಕೋಲ್ಕತ್ತಾ: 1129 ರೂ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ(PMUY) ಯೋಜನೆಯ ಫಲಾನುಭವಿಗಳಿಗೆ ಗೃಹಬಳಕೆಯ LPG ಗ್ಯಾಸ್ ಸಿಲಿಂಡರ್‌ಗಳ ಮೇಲೆ ಸಬ್ಸಿಡಿಯನ್ನು ಸರ್ಕಾರ ಘೋಷಿಸಿದೆ. ಉಜ್ವಲ ಯೋಜನೆಯ 9.59 ಕೋಟಿ ಫಲಾನುಭವಿಗಳು ಪ್ರತಿ ವರ್ಷಕ್ಕೆ ಪ್ರತಿ 14.2 ಕೆಜಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗೆ 200 ಸಬ್ಸಿಡಿ ಪಡೆಯುತ್ತಾರೆ. ವರ್ಷಕ್ಕೆ 12 ಬಾರಿ ಮರುಪೂರಣ ಮಿತಿಯನ್ನು ಮಿತಿಗೊಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read