ಬೀದರ್: ಹೃದಯಾಘಾತದಿಂದ ಸಾವಿನ ಸರಣಿ ಮುಂದುವರೆದಿರುವ ನಡುವೆಯೇ ಲೋ ಬಿಪಿಯಿಂದ ಮೃತಪಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಓರ್ವರು ಲೋ ಬಿಪಿಯಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
28 ವರ್ಷದ ಸರಿತಾ ಮೃತ ಕಾನ್ಸ್ ಟೇಬಲ್. ಬೀದರ್ ನ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೂಲತಃ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಂಚಾವರಂ ಗ್ರಾಮದವರಾದ ಸರಿತಾ ವಾರದ ಹಿಂದೆ ಹೆರಿಗೆಯಾಗಿ ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಬಳಿಕ ಲೋ ಬಿಪಿ ಶುರುವಾಗಿತ್ತು.
ಇದೀಗ ಲೋ ಬಿಪಿಯಿಂದಾಗಿ ಸರಿತಾ ಸಾವನ್ನಪ್ಪಿದ್ದಾರೆ. ಸರಿತಾ ಪತಿ ಕುಪೇಂದ್ರ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.