SHOCKING NEWS: ಪ್ರಿಯತಮನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಿಯತಮೆ; ದುರಂತ ಅಂತ್ಯ ಕಂಡ ಪೊಲೀಸ್ ಕಾನ್ಸ್ ಟೇಬಲ್ ಗಳ ಪ್ರೀತಿ

ಬೆಂಗಳೂರು: ಪ್ರಿಯತಮನಿಗೆ ಪೆಟ್ರೋಲ್ ಸುರಿದು ಪ್ರಿಯತಮೆ ಬೆಂಕಿ ಹಚ್ಚಿ ಹತ್ಯೆಗೈದ ಘೋರ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ಬಳಿ ನಡೆದಿದೆ.

ಕಾನ್ಸ್ ಟೇಬಲ್ ಸಂಜಯ್ ಮೃತ ದುರ್ದೈವಿ. ಕಾನ್ಸ್ ಟೇಬಲ್ ಸಂಜಯ್ ಗೆ ಹೋಮ್ ಗಾರ್ಡ್ ರಾಣಿ ಎಂಬುವವರು ಬೆಂಕಿ ಇಟ್ಟಿದ್ದಾರೆ. ಬೇರೆಯವನ ಜೊತೆ ಲವ್ವಿಡವ್ವಿ ನಡೆಸುತ್ತಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ಹೋಮ್ ಗಾರ್ಡ್ ರಾಣಿ ಈ ಕೃತ್ಯವೆಸಗಿದ್ದಾಳೆ.

ಸಂಜಯ್ ಹಾಗೂ ರಾಣಿ ಇಬ್ಬರೂ ಬಸವನಗುಡಿ ಠಾಣೆಯಲ್ಲಿ ಕೆಲಸ ಮಾಡುತಿದ್ದರು. ಈ ವೇಳೆ ಸಂಜಯ್ ಹಾಗೂ ರಾಣಿ ನಡುವೆ ಪ್ರೀತಿ ಶುರುವಾಗಿತ್ತು. ವಿವಾಹವಾಗಿದ್ದರೂ ಪಿಸಿ ಸಂಜಯ್ ನನ್ನು ರಾಣಿ ಲವ್ ಮಾಡುತ್ತಿದ್ದಳು. ಇತ್ತೀಚೆಗೆ ಕಾನ್ಸ್ ಟೇಬಲ್ ಸಂಜಯ್ ನನ್ನು ರಾಣಿ ಅವೈಡ್ ಮಾಡುತ್ತಿದ್ದಳು. ಇದರಿಂದ ಬೇಸರಗೊಂಡ ಸಂಜಯ್ ಎರಡು ದಿನಗಳ ಹಿಂದೆ ರಾಣಿ ಮನೆಗೆ ಹೋಗಿದ್ದ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಈ ವೇಳೆ ಕಾನ್ಸ್ ಟೇಬಲ್ ಸಂಜಯ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ.

ಗಂಭೀರವಾಗಿ ಗಾಯಗೊಂಡಿರುವ ಕಾನ್ಸ್ ಟೇಬಲ್ ಸಂಜಯ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read