ಕಸೂರ್: ಪಾಕಿಸ್ತಾನದ ಕಸೂರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಮನೆಯ ಬಳಿ ಆಟವಾಡುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆಟವಾಡುತ್ತಿದ್ದ ಬಾಲಕಿ ಬಳಿ ಬಂದ ಕಾಮುಕ ಕಿಸ್ ಕೊಟ್ಟು ಪರಾರಿಯಾಗಿದ್ದಾನೆ.
ಜುಲೈ 25 ರಂದು ನಡೆದ ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆತಂಕಕಾರಿ ವಿಡಿಯೋ ಆನ್ಲೈನ್ನಲ್ಲಿ ವೈರಲ್ ಆಗಿದೆ.
ಘಟನೆಯ ಸಮಯದಲ್ಲಿ, ಖಾರಾ ರಸ್ತೆ ಪ್ರದೇಶದ ಶಾ ಇನಾಯತ್ ಕಾಲೋನಿಯಲ್ಲಿ ಬಾಲಕಿ ಮತ್ತೊಬ್ಬ ಅಪ್ರಾಪ್ತ ಬಾಲಕನೊಂದಿಗೆ ಆಟವಾಡುತ್ತಿದ್ದಳು. ಮಕ್ಕಳು ತಮ್ಮ ಸೈಕಲ್ ನಲ್ಲಿ ಆಟವಾಡುತ್ತಿದ್ದಾಗ ಹಿಂದಿನಿಂದ ಒಬ್ಬ ವ್ಯಕ್ತಿ ಬರುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅಪ್ರಾಪ್ತ ಬಾಲಕ ತನ್ನ ಟ್ರೈಸಿಕಲ್ನೊಂದಿಗೆ ಮುಂದೆ ಹೋದಾಗ, ಬಾಲಕಿ ಹಿಂದೆ ಉಳಿದಿದ್ದಳು. ಬಾಲಕಿ ಒಂಟಿಯಾಗಿರುವುದನ್ನು ಕಂಡು ಆ ವ್ಯಕ್ತಿ ಆಕೆಗೆ ಕಿಸ್ ಕೊಟ್ಟು ಓಡಿ ಹೋಗಿದ್ದಾನೆ. ಘಟನೆಯಿಂದ ಭಯಗೊಂಡ ಬಾಲಕಿ ಕಿರುಚಲು ಪ್ರಾರಂಭಿಸಿದ್ದು, ತನ್ನ ಮನೆಯ ಕಡೆಗೆ ಧಾವಿಸಿದಳು.
قصور، شاہ عنایت کالونی میں گلی میں کھیلتی کمسن بچی سے درندگی کی کوشش، افسوسناک واقعہ 25 جولائی کو پیش آیا۔ pic.twitter.com/qnp4czsR19
— Neelum Yousaf (@NeelumYousaf23) July 28, 2025