ಪ್ರೀತಿ – ಸಂಬಂಧಗಳನ್ನು ಗಟ್ಟಿಗೊಳಿಸುತ್ತೆ ಈ ‘ಹವಳ’

ಜ್ಯೋತಿಷ್ಯ ಶಾಸ್ತ್ರದಲ್ಲಿ ರತ್ನಕ್ಕೆ ಮಹತ್ವದ ಸ್ಥಾನವಿದೆ. ರತ್ನಗಳನ್ನು ಧರಿಸುವುದರಿಂದ ಗ್ರಹ ದೋಷ ನಿವಾರಣೆಯಾಗುತ್ತದೆ. ಗ್ರಹಗಳನ್ನು ಬಲಪಡಿಸಲು ರತ್ನಗಳನ್ನು ಧರಿಸಬೇಕೆಂದು ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಸಲಹೆ ನೀಡಲಾಗಿದೆ. ನೀಲಮ್, ಪಚ್ಚೆ, ಹವಳಕ್ಕೆ ಅದರದ್ದೇ ಆದ ಮಹತ್ವವಿದೆ.

ಕೆಲವೊಂದು ರತ್ನ ಅತಿ ಕಡಿಮೆ ಬೆಲೆಗೆ ಸಿಗುತ್ತದೆ. ಆದ್ರೆ ಅದ್ರ ಪ್ರಭಾವ ಹೆಚ್ಚಿರುತ್ತದೆ. ನೀಲಿ (ಫಿರೋಜಾ) ಹವಳ ನೀಲಿ ಬಣ್ಣದಲ್ಲಿರುತ್ತದೆ. ಇದು ಪ್ರೇಮ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಇದ್ರಿಂದ ರೋಗ ಕಡಿಮೆಯಾಗಲಿದೆ.

ಈ ಹವಳವನ್ನು ಧನು ಹಾಗೂ ಮೀನ ರಾಶಿಯವರು ಅವಶ್ಯವಾಗಿ ಧರಿಸಬೇಕು. ಗುರು ಗ್ರಹ ದುರ್ಬಲವಾಗಿರುವ ವ್ಯಕ್ತಿಗಳು ಈ ಹವಳವನ್ನು ಧರಿಸಬೇಕು. ಈ ಹವಳವನ್ನು ಧರಿಸುವುದರಿಂದ ಗುರು ಗ್ರಹ ಬಲಿಷ್ಠವಾಗುತ್ತದೆ ಎಂದು ನಂಬಲಾಗಿದೆ. ಇದು ಜನರ ನಂಬಿಕೆಯನ್ನು ಆಧರಿಸಿದೆ. ಯಾವುದೇ ಹವಳ ಧರಿಸುವ ಮೊದಲು ಜಾತಕ ತೋರಿಸಿ ಜ್ಯೋತಿಷ್ಯಿಗಳಿಂದ ಮಾಹಿತಿ ಪಡೆಯುವುದು ಅಗತ್ಯ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read