ಗ್ರಾಮದಲ್ಲಿ ಹೆಚ್ಚಿದ ಪ್ರೇಮ ವಿವಾಹ ತಡೆಗೆ ಮಹತ್ವದ ನಿರ್ಣಯ: ಲವ್ ಮ್ಯಾರೇಜ್ ನಿಷೇಧ

ಕಲಬುರಗಿ: ಕಲಬುರಗಿ ಜಿಲ್ಲೆ ಕಮಲಾಪುರ ಸಮೀಪದ ಡೋಂಗರಗಾಂವ್ ಗ್ರಾಮದಲ್ಲಿ ಪ್ರೇಮ ವಿವಾಹ ನಿಷೇಧಿಸಿ ಠರಾವು ಪಾಸ್ ಮಾಡಲಾಗಿದೆ.

ಮಂಗಳವಾರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ನಡೆಸಿ ಗ್ರಾಮಸ್ಥರೆಲ್ಲರ ಅಭಿಪ್ರಾಯದ ಮೇರೆಗೆ ಪ್ರೇಮ ವಿವಾಹ ನಿಷೇಧಿಸಿ ನಿರ್ಣಯ ಕೈಗೊಳ್ಳಲಾಗಿದೆ. ಗ್ರಾಮದಲ್ಲಿ ಇತ್ತೀಚೆಗೆ ಅಪ್ರಾಪ್ತ ಬಾಲಕರು, ಬಾಲಕಿಯರ ಪ್ರೇಮ ವಿವಾಹ ಪ್ರಕರಣಗಳು ಹೆಚ್ಚಾಗುತ್ತಿವೆ. ವಯಸ್ಸಲ್ಲದ ವಯಸ್ಸಲ್ಲಿ ಮದುವೆಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಏನೂ ಅರಿಯದ ವಯಸ್ಸಿನಲ್ಲಿ ಮದುವೆಯಾಗಿ ಸಮಸ್ಯೆ ಅನುಭವಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಾಮಾನ್ಯ ಸಭೆ ನಡೆಸಿ ಪ್ರೇಮ ವಿವಾಹವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಒಂದು ವೇಳೆ ಯುವಕ, ಯುವತಿ ಪ್ರೀತಿಸುತ್ತಿದ್ದಲ್ಲಿ ಪೋಷಕರ ಗಮನಕ್ಕೆ ತರಬೇಕು. ಪೋಷಕರ ಒಪ್ಪಿಗೆ ದೊರೆತರೆ ಮಾತ್ರ ಮದುವೆ ಮಾಡಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read