50 ಸಾವಿರಕ್ಕೂ ಅಧಿಕ ವಜ್ರಗಳೊಂದಿಗೆ ಅತಿ ದೊಡ್ಡ ಉಂಗುರ ತಯಾರಿ; ಗಿನ್ನಿಸ್ ವಿಶ್ವದಾಖಲೆ

ನೀವು ಇಲ್ಲಿಯವರೆಗೆ ನೋಡಿದ ದೊಡ್ಡ ಉಂಗುರ ಯಾವುದು ? ಮುಂಬೈನ ಆಭರಣ ವ್ಯಾಪಾರಿಯೊಬ್ಬರು ಸಂಪೂರ್ಣ ಕೈ ಬೆರಳುಗಳನ್ನು ಮುಚ್ಚುವಷ್ಟು ದೊಡ್ಡ ಉಂಗುರವನ್ನು ತಯಾರಿಸಿ ಗಿನ್ನಿಸ್ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.

ಉಂಗುರವನ್ನು ಎಚ್.ಕೆ. ಡಿಸೈನ್ಸ್ ಮತ್ತು ಹರಿಕೃಷ್ಣ ಎಕ್ಸ್‌ಪೋರ್ಟ್ಸ್ ಪ್ರೈ. ಲಿಮಿಟೆಡ್ ಮುಂಬೈನಲ್ಲಿರುವ ಒಂದು ಉಂಗುರದಲ್ಲಿ 50,000ಕ್ಕೂ ಹೆಚ್ಚು ವಜ್ರಗಳನ್ನು ಇಡುವುದರೊಂದಿಗೆ ವಿಶ್ವ ದಾಖಲೆಯನ್ನು ಮಾಡಿದೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ (ಜಿಡಬ್ಲ್ಯೂಆರ್) ಪ್ರಕಾರ, ಈ ವರ್ಷ ಮಾರ್ಚ್ 11 ರಂದು ಈ ಸಾಧನೆ ಮಾಡಿದೆ.

ಉಂಗುರಕ್ಕೆ ಯುಟಿಯೆರಿಯಾ ಎಂದು ಹೆಸರಿಸಲಾಗಿದೆ. ಇದರರ್ಥ ಪ್ರಕೃತಿಯೊಂದಿಗೆ ಒಂದಾಗುವುದು. ಸೂರ್ಯಕಾಂತಿಯ ಮೇಲೆ ಚಿಟ್ಟೆ ಕೂರುವಂತೆ ಉಂಗುರದ ಡಿಸೈನ್ ಅನ್ನು ಮಾಡಲಾಗಿದೆ. ಸಿದ್ಧಪಡಿಸಿದ ಉಂಗುರವು 460.55 ಗ್ರಾಂ ತೂಕ ಮತ್ತು ರೂ. 6.4 ಕೋಟಿ ಮೌಲ್ಯವನ್ನು ಹೊಂದಿದೆ.

ಇದು ಸಂಪೂರ್ಣವಾಗಿ ಮರುಬಳಕೆಯ ವಸ್ತುಗಳಿಂದ ಮಾಡಲ್ಪಟ್ಟಿದೆ. ಆಭರಣದ ತುಣುಕನ್ನು ರಚಿಸಲು ಗ್ರಾಹಕರಿಂದ ಪಡೆದ ಮರುಬಳಕೆಯ ಚಿನ್ನವನ್ನು ಮರುಬಳಕೆಯ ವಜ್ರಗಳೊಂದಿಗೆ ಬೆರೆಸಲಾಯಿತು. 50,907 ವಜ್ರಗಳನ್ನು ಹೊಂದಿರುವ ಉಂಗುರವು ಪೂರ್ಣಗೊಳ್ಳಲು ಸುಮಾರು ಒಂಬತ್ತು ತಿಂಗಳುಗಳನ್ನು ತೆಗೆದುಕೊಂಡಿತು.

ಈ ಹಿಂದೆ ಎಸ್ ಡಬ್ಲ್ಯೂಎ ಡೈಮಂಡ್ಸ್ ಕಳೆದ ವರ್ಷವಷ್ಟೇ ಈ ದಾಖಲೆಯನ್ನು ಹೊಂದಿತ್ತು. ಅವರ ಅಮಿ ಮಶ್ರೂಮ್ ಆಕಾರದ ಉಂಗುರವು 24,679 ವಜ್ರಗಳನ್ನು ಒಳಗೊಂಡಿದೆ. ಇದೀಗ ಈ ದಾಖಲೆಯನ್ನು ಇದು ಮುರಿದಿದೆ.

https://twitter.com/GWR/status/1651876315455258624?ref_src=twsrc%5Etfw%7Ctwcamp%5Etweetembed%7Ctwterm%5E1651876315455258

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read