821 ಕೋಟಿ ರೂ. ಹಗರಣ ಆರೋಪ: ಯಡಿಯೂರಪ್ಪ, ಸಚಿವರು, ಐಎಎಸ್ ಅಧಿಕಾರಿಗಳು ಸೇರಿ 28 ಜನರ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರು: ಬರೋಬ್ಬರಿ 821 ಕೋಟಿ ರೂ. ಬೃಹತ್ ಹಗರಣ ನಡೆಸಿದ ಆರೋಪ ಕೇಳಿ ಬಂದಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲಾಗಿದೆ.

ಸಚಿವರು, ಐಎಎಸ್ ಅಧಿಕಾರಿಗಳು ಸೇರಿದಂತೆ 28 ಜನರ ವಿರುದ್ಧ ಆರ್‌ಟಿಐ ಕಾರ್ಯಕರ್ತ ಟಿ.ಜೆ. ಅಬ್ರಹಾಂ ದೂರು ನೀಡಿದ್ದಾರೆ. ಕೊರೋನಾ ನಿರ್ವಹಣೆ ವೇಳೆ ಬಿಬಿಎಂಪಿಯಿಂದ ಕೋಟ್ಯಂತರ ರೂ. ಅವ್ಯವಹಾರ ನಡೆಸಲಾಗಿದೆ. ಆಂಬುಲೆನ್ಸ್ ಖರೀದಿ ನೆಪದಲ್ಲಿ ಹೆಚ್ಚಿನ ವಾಹನ ಸಂಖ್ಯೆಗಳನ್ನು ತೋರಿಸಿದ್ದಾರೆ ಎಂದು ಹೇಳಲಾಗಿದೆ.

ಉಸ್ತುವಾರಿಯಾಗಿದ್ದ ಮಾಜಿ ಸಿಎಂ ಬಿ.ಎಸ್.ವೈ., ಜೊನಲ್ ಮ್ಯಾನೇಜ್ಮೆಂಟ್ ನಿರ್ವಹಿಸಿದ್ದ ಸಚಿವರಾದ ವಿ. ಸೋಮಣ್ಣ, ಅಶ್ವತ್ಥ್ ನಾರಾಯಣ, ಸುರೇಶ್ ಕುಮಾರ್, ಎಸ್.ಟಿ. ಸೋಮಶೇಖರ್, ಗೋಪಾಲಯ್ಯ, ಐಎಎಸ್ ಅಧಿಕಾರಿಗಳಾದ ಗೌರವ್ ಗುಪ್ತಾ, ಪಿ.ಸಿ. ಜಾಫರ್, ಮನೋಜ್ ಕುಮಾರ್ ಮೀನಾ, ರವಿಕುಮಾರ್, ಉಜ್ವಲ್ ಕುಮಾರ್, ಪಂಕಜ್ ಕುಮಾರ್ ಕೋಆರ್ಡಿನೇಟ್ ಮಾಡುತ್ತಿದ್ದರು ಎನ್ನಲಾಗಿದೆ.

ಕೊರೋನಾ ವೇಳೆ ಬೆಂಗಳೂರನ್ನು 8 ವಲಯಗಳಾಗಿ ವಿಂಗಡಿಸಿದ್ದರು. ಸಾವಿರಾರು ಆಂಬುಲೆನ್ಸ್ ಗಳನ್ನು ಖರೀದಿಸಿರುವುದಾಗಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಆಂಬುಲೆನ್ಸ್ ಖರೀದಿ ನೆಪದಲ್ಲಿ ನಕಲಿ ಬಿಲ್ ಸೃಷ್ಟಿಸಲಾಗಿದೆ. ಆಂಬುಲೆನ್ಸ್ ಹೊರತಾದ ವಾಹನಗಳ ನೋಂದಣಿ ಸಂಖ್ಯೆಗಳಿದ್ದು, ದಾಖಲೆ ಸಮೇತ ಆರ್‌ಟಿಐ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಹಗರಣದಲ್ಲಿ ಬಹು ಪಾಲು ಸರ್ಕಾರಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ಕೊರೋನಾ ವೇಳೆ ಜನರ ಹೆಣ ಮಾರಿ ಹಣ ಮಾಡಿದ್ದಾರೆ ಎಂದು ಅಬ್ರಾಹಂ ಆರೋಪಿಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಎಫ್ಐಆರ್ ದಾಖಲಿಸಿ ತನಿಖೆ ಮಾಡಬೇಕಿದೆ.

ಟ್ರಾವೆಲ್ಸ್ ನಲ್ಲಿ ಖರೀದಿ ಮಾಡಿರುವುದಾಗಿ ದಾಖಲೆ ಸೃಷ್ಟಿಸಿದ್ದಾರೆ. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಆಪ್ತ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಲೋಕಾಯುಕ್ತ ಎಫ್ಐಆರ್ ದಾಖಲಿಸದಿದ್ದರೆ ಮುಂದೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಅಬ್ರಹಾಂ ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read