ಐಪಿಎಲ್ ಬೆಟ್ಟಿಂಗ್: ಲಂಚ ಸ್ವೀಕರಿಸುತ್ತಿದ್ದ ಪಿಎಸ್ಐ, ಪೊಲೀಸ್ ಅರೆಸ್ಟ್

ರಾಯಚೂರು: ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರು ಪೊಲೀಸ್ ಠಾಣೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಲಂಚ ಪಡೆದ ಆರೋಪದ ಮೇಲೆ ಗಬ್ಬೂರು ಠಾಣೆಯ ಪಿಎಸ್ಐ ಮಂಜುನಾಥ್, ಕಾನ್ಸ್ಟೇಬಲ್ ರಮೇಶ್ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.

ಗಬ್ಬೂರು ಪಿಎಸ್ಐ ಮಂಜುನಾಥ್ ವಿರುದ್ಧ ಐಪಿಎಲ್ ಬೆಟ್ಟಿಂಗ್ ವಿಚಾರವಾಗಿ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿತ್ತು. ಫಾರೂಕ್ ಎಂಬಾತನಿಗೆ ಬೆಟ್ಟಿಂಗ್ ವಿಚಾರವಾಗಿ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, ಪಿಎಸ್ಐ ಮಂಜುನಾಥ್ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿತ್ತು. ಫಾರೂಕ್ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ

ಮೊದಲ ಕಂತಿನಲ್ಲಿ ಫಾರೂಕ್ ನಿಂದ ಒಂದು ಲಕ್ಷ ಹಣ ಪಡೆದಿದ್ದು, ನಂತರ 70 ಸಾವಿರ ರೂ. ಪಡೆದಿದ್ದರು. ಇಂದು ಕಾನ್ಸ್ಟೇಬಲ್ ರಮೇಶ್ 50 ಸಾವಿರ ರೂ. ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ವಿಚಾರಣೆ ವೇಳೆ ಪಿಎಸ್ಐ ಮಂಜುನಾಥ್ ವಿರುದ್ಧ ಆರೋಪ ಮಾಡಲಾಗಿದೆ. ಹೀಗಾಗಿ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಹೇಳಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read