BIG NEWS: ಲೋಕಸಭಾ ಚುನಾವಣೆ: ಬಿಬಿಎಂಪಿ ವ್ಯಾಪ್ತಿಯಲ್ಲಿ 8,984 ಮತಗಟ್ಟೆಗಳ ಸ್ಥಾಪನೆ; ಮತದಾನಕ್ಕೆ ಕಟ್ಟೆಚ್ಚರ; ಮದ್ಯ ಮಾರಾಟಕ್ಕೆ ಬ್ರೇಕ್

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಭರ್ಜರಿ ಸಿದ್ಧತೆ ನಡೆದಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆ, ಬಿಬಿಎಂಪಿ ಅಧಿಕಾರಿಗಳು ಚುನಾವಣಾ ಅಕ್ರಮ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಏಪ್ರಿಲ್ 26ರಂದು ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಬೆಂಗಳೂರಿನ 5 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 8984 ಮತಗಟ್ಟೆಗಳಿವೆ. ಇದರಲ್ಲಿ 2003 ಕ್ರಿಟಿಕಲ್ ಮತಗಟ್ಟೆಗಳು, 253 ವಲ್ನರಬಲ್ ಮತಗಟ್ಟೆಗಳು, 30 ಎಕ್ಸ್ ಪೆಂಡಿಚರ್ ಸೆನ್ಸಿಟಿವ್ ಮತಗಟ್ಟೆಗಳು, 305 ಮೈಕ್ರೋ ಅಬ್ಸರ್ವರ್ಗಳಿವೆ.

ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ 11,794 ಸಿಎಪಿಎಫ್ ಮತ್ತು ನಾನ್ ಸಿಎ ಪಿಎಫ್ ತಂಡಗಳ ನಿಯೋಜನೆ ಮಾಡಲಾಗುತ್ತಿದೆ. 103 ಚೆಕ್ ಪೋಸ್ಟ್ ಗಳು, 91 ಫ್ಲೈಯಿಂಗ್ ಸ್ಕ್ವ್ಯಾಡ್ ಗಳು ಇರಲಿವೆ.

5117 ರೌಡಿ ಶೀಟರ್ ಗಳನ್ನು ಗುರುತಿ ಕ್ರಮ ಕೈಗೊಳ್ಳಲಾಗಿದ್ದು, 7,533 ಪರವಾನಿಗೆ ಇರುವ ಶಸ್ತ್ರಾಸ್ತ್ರಗಳನ್ನು ಜಮಾ ಮಾಡಲಾಗಿದೆ. ಮತದಾನ ಅವಧಿಯ ಹಿಂದಿನ 48 ಗಂಟೆಗಳ ಕಾಲ ಮದ್ಯ ಮಾರಾಟ, ಮಾದಕ ವಸ್ತುಗಳ ಮಾರಾಟ ನಿಷೇಧಿಸಲಾಗಿದೆ.

ಬೆಂಗಳೂರಿನಲ್ಲಿ 1.10 ಕೋಟಿಗೂ ಹೆಚ್ಚು ಮತದಾರರಿದ್ದು, 31 ಸಾವಿರ ವಿಶೇಷ ಚೇತನರು, 1685 ಸೇವಾ ಮತದಾರರು, 1,60,232 ಯುವ ಮತದಾರರು, 2158 ಎನ್ ಆರ್ ಐ ಮತದಾರರು ಇದ್ದಾರೆ. 105 ಚೆಕ್ ಪೋಸ್ಟ್, 28 ಮಸ್ಟರಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ. ಯಾವುದೇ ರೀತಿಯ ಚುನಾವಣಾ ಅಕ್ರಮ ನಡೆಯದಂತೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read