ಮೂರನೇ ಬಾರಿಗೆ ಬಿಜೆಪಿ –NDA ಸರ್ಕಾರ ರಚನೆಗೆ ದೇಶದ ಜನರ ನಿರ್ಧಾರ: ಪ್ರಧಾನಿ ಮೋದಿ

ನವದೆಹಲಿ: ‘ದೇಶದ ಜನ ಮೂರನೇ ಬಾರಿಗೆ ಬಿಜೆಪಿ-ಎನ್‌ಡಿಎ ಸರ್ಕಾರ ರಚಿಸಲು ನಿರ್ಧರಿಸಿದ್ದಾರೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ

ಜೂನ್ 1 ರಂದು(ಶನಿವಾರ) ಏಳನೇ ಮತ್ತು ಅಂತಿಮ ಹಂತದಲ್ಲಿ ಚುನಾವಣೆ ನಡೆಯಲಿರುವ ಸ್ಥಾನಗಳತ್ತ ಹಲವಾರು ರಾಜಕೀಯ ಪಕ್ಷಗಳ ನಾಯಕರು ತಮ್ಮ ಗಮನ ಹರಿಸಿದ್ದಾರೆ.

ಅಂತೆಯೇ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜೂನ್ 4 ರಂದು ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎಂದು ಹೇಳಿದರು. ಆರು ಹಂತಗಳಲ್ಲಿ ಸಾರ್ವಜನಿಕರು ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ದೃಢಪಡಿಸಿದ್ದಾರೆ. ‘ಇಂಡಿಯಾ ಮೈತ್ರಿ’ ಕೋಮುವಾದ, ಜಾತಿವಾದಿ ಎಂದು ದೇಶವು ಅರ್ಥಮಾಡಿಕೊಂಡಿದೆ. ‘ಇಂಡಿಯಾ ಮೈತ್ರಿಕೂಟ’ವು ಬಂದರೆ ಐದು ವರ್ಷಗಳಲ್ಲಿ ಐದು ಪ್ರಧಾನಿಗಳನ್ನು ಕಾಣುತ್ತದೆ ಎಂದು ಟೀಕಿಸಿದ್ದಾರೆ.

ಉತ್ತಮ ಉದ್ದೇಶಗಳು, ನೀತಿಗಳಿಂದಾಗಿ ಮೂರನೇ ಬಾರಿಗೆ ಬಿಜೆಪಿ-ಎನ್‌ಡಿಎ ಸರ್ಕಾರವನ್ನು ರಚಿಸಲು ದೇಶವು ನಿರ್ಧರಿಸಿದೆ. ವಿರೋಧ ಪಕ್ಷವಾದ ಇಂಡಿಯಾ ಬಣವನ್ನು ಕೋಮುವಾದಿ ಮತ್ತು ಜಾತಿವಾದಿ ಎಂದು ಟೀಕಿಸಿದ ಅವರು ಎಸ್‌ಪಿ-ಕಾಂಗ್ರೆಸ್ ಮತ ಬ್ಯಾಂಕ್‌ಗೆ ಮೀಸಲಾಗಿದ್ದರೆ, ಮೋದಿ ಹಿಂದುಳಿದವರು ಮತ್ತು ಬಡವರ ಹಕ್ಕುಗಳಿಗೆ ಮೀಸಲಾಗಿದ್ದಾರೆ ಎಂದರು.

ಚುನಾವಣಾ ಸಭೆಯಲ್ಲಿ ಮಿರ್ಜಾಪುರ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಪಾಲುದಾರ ಅಪ್ನಾ ದಳದ ಅಭ್ಯರ್ಥಿ ಅನುಪ್ರಿಯಾ ಪಟೇಲ್ ಮತ್ತು ರಾಬರ್ಟ್ಸ್‌ ಗಂಜ್ ಲೋಕಸಭಾ ಕ್ಷೇತ್ರದ ರಿಂಕಿ ಕೋಲ್ ಅವರ ಪರ ಪ್ರಚಾರ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read