ಸಾಲ ಮಾಡಿದ ತಂದೆ, ಮಗನನ್ನು ಮರಕ್ಕೆ ಕಟ್ಟಿ ಥಳಿಸಿದ ಸಾಲ ಕೊಟ್ಟವರು

ಕೊಪ್ಪಳ: ಸಾಲ ತೀರಿಸಿಲ್ಲವೆಂದು ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕೆ. ಹೊಸೂರು ಗ್ರಾಮದಲ್ಲಿ ನಡೆದಿದೆ.

ಡಿಸೆಂಬರ್ 28ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಂದೆ ಸಾಲ ಮಾಡಿದ್ದು ಅದನ್ನು ತೀರಿಸಿಲ್ಲ ಎಂದು ಸಾಲ ಕೊಟ್ಟವರು 14 ವರ್ಷದ ದೊಡ್ಡಬಸಪ್ಪ ಮಡಿವಾಳರ ಎಂಬ ಬಾಲಕನನ್ನು ಥಳಿಸಿದ್ದಾರೆ. ಬಾಲಕನ ತಾಯಿ ಮಂಜುಳಾ ಈ ಬಗ್ಗೆ ದೂರು ನೀಡಿದ್ದಾರೆ.

ಗ್ರಾಮದ ಕನಕರಾಯ, ರಾಜೇಶ್ವರಿ, ವೀರಭದ್ರಪ್ಪ, ಗಂಗಮ್ಮ, ವಿರುಪಾದಪ್ಪ, ಬಸವರಾಜ ವಿರುದ್ಧ ಬಾಲಕನ ತಾಯಿ ದೂರು ನೀಡಿದ್ದಾರೆ. ಡಿಸೆಂಬರ್ 31 ರಂದು ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷರಿಗೆ ಬಾಲಕನ ತಾಯಿ ದೂರು ನೀಡಿದ್ದಾರೆ.

ಬಾಲಕನ ತಂದೆ ಮರಿಯಪ್ಪ ಮಡಿವಾಳರ 40,000 ರೂ. ಸಾಲ ಪಡೆದುಕೊಂಡಿದ್ದರು. ಅದರಲ್ಲಿ 30,000 ರೂ. ವಾಪಸ್ ನೀಡಿದ್ದರು. ಉಳಿದ 10,000 ರೂ. ಸಾಲ ವಾಪಸ್ ನೀಡಿಲ್ಲವೆಂದು ಬಾಲಕನನ್ನು ಥಳಿಸಲಾಗಿದೆ. ಮರಿಯಪ್ಪ ಅವರ ಪುತ್ರ 14 ವರ್ಷದ ದೊಡ್ಡಬಸಪ್ಪ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read