ಸಾರ್ವಜನಿಕ ಸೇವೆಯಲ್ಲಿರುವವರು ಜನರ ಸೇವೆ ಮಾಡುತ್ತಿರುತ್ತಾರೆ. ದಿನದ 24 ಗಂಟೆಯೂ ದುಡಿಯುವ ಪೊಲೀಸರಂತೂ ಸೇವೆಗೆ ಸದಾ ಕಾಲ ಸಿದ್ಧರಿರ್ತಾರೆ. ಇಂತವರ ವೃತ್ತಿ ಬದುಕಿನ ಕೊನೆಯ ದಿನ ವಿಶೇಷವಾಗಿ ವಿದಾಯ ಹೇಳಲಾಗುತ್ತದೆ. ಇಂತಹ ಕಾರ್ಯದಲ್ಲಿ ಯೂಬ್ಯೂಬರ್ ಒಬ್ಬರು ನಿವೃತ್ತಿಯಾದ ಪೊಲೀಸರ್ ಅಧಿಕಾರಿಗೆ ಭವ್ಯವಾಗಿ ವಿದಾಯ ಹೇಳಿದ್ದಾರೆ.
ಯೂಟ್ಯೂಬರ್ ಮ್ಯಾಟಿಲ್ಪ್ ನಿವೃತ್ತಿಯಾದ ಪೊಲೀಸ್ ಅಧಿಕಾರಿಗೆ ಭವ್ಯವಾದ ವಿದಾಯವನ್ನು ಆಯೋಜಿಸಿದ್ದು ವೈರಲ್ ಆಗಿದೆ. ನಿವೃತ್ತಿಯ ದಿನ ಅಧಿಕಾರಿಗೆ ಹೆಲಿಕಾಪ್ಟರ್ ಸವಾರಿ ಮಾಡಿಸಿದ್ದು ಈ ಅನಿರೀಕ್ಷಿತ ಮತ್ತು ಸೊಗಸಾದ ವಿದಾಯ ಗಮನ ಸೆಳೆದಿದ್ದು ವೈರಲ್ ಆಗಿದೆ.
ಮ್ಯಾಟಿಲ್ಪ್ ಎಂದು ಕರೆಯಲ್ಪಡುವ ಯೂಟ್ಯೂಬರ್‌ಗೆ ಪೊಲೀಸ್ ಇಲಾಖೆಯು ವಿಶೇಷ ಅನುಕೂಲ ಮಾಡಿಕೊಡಬೇಕಾಗಿ ಕೇಳಿಕೊಂಡಿತ್ತು. ಆದರೆ ಯೂಟ್ಯೂಬರ್ ಗೆ ಈ ಬಗ್ಗೆ ಹೆಲಿಕಾಪ್ಟರ್ ಲ್ಯಾಂಡ್ ಆಗುವವರೆಗೆ ಗೊತ್ತಿರಲಿಲ್ಲ. ಪೊಲೀಸರ ಉದ್ದೇಶ ಗೊತ್ತಾದ ನಂತರ ಯೂಟ್ಯೂಬರ್ ಮ್ಯಾಟಿಲ್ಪ್, ನಿವೃತ್ತಿಯಾಗ್ತಿದ್ದ ಪೊಲೀಸ್ ಅಧಿಕಾರಿ ಟೋನಿಯನ್ನ ಹೆಲಿಕಾಪ್ಟರ್ ನಲ್ಲಿ ಕೂರಿಸಿಕೊಂಡು ಪ್ರಯಾಣ ಮಾಡಿದರು. ಈ ವೇಳೆಯೂ ಟೋನಿ ರೇಡಿಯೋ ಕಾಲ್ ಮಾಡುವ ಮೂಲಕ ತಮ್ಮ ಕೊನೆಯ ದಿನದ ಕರ್ತವ್ಯ ನಿಭಾಯಿಸಿದ್ದರು. ಹೆಲಿಕಾಪ್ಟರ್ ಪ್ರಯಾಣದಿಂದ ಸಂತಸಪಟ್ಟ ಅಧಿಕಾರಿ ಟೋನಿ ಕೃತಜ್ಞತೆ ಸಲ್ಲಿಸಿದರು.
ಈ ವೀಡಿಯೊ 6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನಿವೃತ್ತ ಅಧಿಕಾರಿಗೆ ಭವ್ಯವಾದ ವಿದಾಯ ಒದಗಿಸಿದ್ದಕ್ಕಾಗಿ ನೆಟ್ಟಿಗರು ಯೂಟ್ಯೂಬರ್‌ಗೆ ಧನ್ಯವಾದ ಅರ್ಪಿಸಿದ್ದಾರೆ.