ಬೆಳಗಾವಿ: ಯುವತಿಯರು, ಮಹಿಳೆಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಇನ್ಸ್ಟಾಗ್ರಾಮ್ ಗೆ ಅಪ್ಲೋಡ್ ಮಾಡುತ್ತಿದ್ದ ಯುವಕನನ್ನು ಬಂಧಿಸಲಾಗಿದೆ.
ಈ ರೀತಿ ವಿಕೃತಿ ಎಸಗುತ್ತಿರುವ ಯುವಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಲೋಕುಳಿ ಗ್ರಾಮದ 100ಕ್ಕೂ ಅಧಿಕ ಮಹಿಳೆಯರು ಬೆಳಗಾವಿ ಜಿಲ್ಲೆ ಖಾನಾಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಮಹಿಳೆಯರ ಪ್ರತಿಭಟನೆಯ ನಂತರ ಕ್ರಮ ಕೈಗೊಂಡ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಲೋಕುಳಿ ಗ್ರಾಮದ ಮಂಥನ ದಶರಥ ಪಾಟೀಲ್(22) ಬಂಧಿತ ಆರೋಪಿ. ಗ್ರಾಮದ ಮನೆಯ ಹಿತ್ತಲುಗಳಲ್ಲಿ ಒಣಗಲು ಹಾಕಿದ್ದ ಒಳ ಉಡುಪು ಕದಿಯುವುದು, ಅವುಗಳನ್ನು ಕತ್ತರಿಸಿ ಬೇರೆಯವರ ಮನೆ ಆವರಣದಲ್ಲಿ ಎಸೆಯುವುದು, ಗ್ರಾಮದ ಯುವತಿಯರು, ಮಹಿಳೆಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಜಾಲತಾಣಗಳಿಗೆ ಅಪ್ಲೋಡ್ ಮಾಡುತ್ತಿದ್ದ ಎಂದು ಮಂಥನ ವಿರುದ್ಧ ಮಹಿಳೆಯರು ದೂರು ದಾಖಲಿಸಿದ್ದಾರೆ. ಮಹಿಳೆಯರ ಪ್ರತಿಭಟನೆಯ ನಂತರ ಕ್ರಮ ಕೈಗೊಂಡ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.