ಕಾಡು ಪ್ರಾಣಿಗಳು ಅಥವಾ ಪಕ್ಷಿಗಳು ಎಂದಿಗೂ ಮಾನವಕುಲವನ್ನು ವಿಸ್ಮಯಗೊಳಿಸುತ್ತಲೇ ಇರುತ್ತವೆ. ಇಂದಿನ ಡಿಜಿಟಲ್ ಯುಗಕ್ಕೆ ಧನ್ಯವಾದಗಳು. ಏಕೆಂದರೆ ಅತಿ ವಿಸ್ಮಯ ಲೋಕವನ್ನು ನಾವು ಮನೆಯಲ್ಲಿಯೇ ಕುಳಿತು ನೋಡಲು ಇದು ಸಹಾಯ ಮಾಡಿದೆ.
ಅಂಥದ್ದೇ ಒಂದು ಕುತೂಹಲದ ವಿಡಿಯೋ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ಮರಿ ಹಕ್ಕಿಯನ್ನು ನೀವು ನೋಡಬಹುದು. ಕೆಲವು ಹಕ್ಕಿಗಳು ಸುತ್ತಲಿನ ಪರಿಸರಕ್ಕೆ ತಕ್ಕಂತೆ ತಮ್ಮ ಬಣ್ಣವನ್ನು ಬದಲಾಯಿಸಿಕೊಳ್ಳುವ ಪವಾಡವನ್ನು ಹೊಂದಿವೆ. ಅಂಥದ್ದೇ ಒಂದು ವಿಡಿಯೋ ಇದಾಗಿದೆ. ಈ ಪಕ್ಷಿಯನ್ನು ಉರುಟೌ ಎಂದು ಗುರುತಿಸಲಾಗಿದೆ, ಇದನ್ನು ಪ್ರೇತ ಪಕ್ಷಿ ಎಂದೂ ಕರೆಯುತ್ತಾರೆ.
ಕಾಂಡ ಮತ್ತು ಪ್ರೇತ ಪಕ್ಷಿಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಹಕ್ಕಿಯ ಗರಿಗಳು ಅದರ ಪರಿಸರದ ಬಣ್ಣಕ್ಕೆ ಹೋಲುತ್ತವೆಯಾದರೂ, ಅದು ತನ್ನ ಮುಖವನ್ನು ಆಕಾಶಕ್ಕೆ ತೋರಿಸುವುದನ್ನು ನೋಡಬಹುದು, ಈ ವಿಡಿಯೋದಲ್ಲಿ ಮೊದಲು ಮರ ಮಾತ್ರ ಕಾಣಬಹುದು. ನಂತರ ಒಬ್ಬ ವ್ಯಕ್ತಿ ಮುಟ್ಟಿದಾಗಲೇ ಗೊತ್ತಾಗುವುದು, ಅಲ್ಲೊಂದು ಹಕ್ಕಿಯ ಮರಿ ಇದೆ ಎಂದು. ಇನ್ನೂ ಅಚ್ಚರಿಯ ವಿಷಯವೆಂದರೆ ಆ ಮರಿ ಹಕ್ಕಿಯ ಪಕ್ಕ ಇರುವುದು ಮರದ ಕಾಂಡವಲ್ಲ, ಬದಲಿಗೆ ಅದರ ಅಮ್ಮ ಎಂದು ತಿಳಿಯುವುದು ಕೂಡ ಆ ಹಕ್ಕಿಯನ್ನು ಮುಟ್ಟಿದಾಗ ಅದು ಚಲಿಸುವುದನ್ನು ನೋಡಿದಾಗಲೇ! ಪ್ರಕೃತಿಯ ಈ ವಿಸ್ಮಯಕ್ಕೆ ನೆಟ್ಟಿಗರು ಬೆರಗಾಗುತ್ತಿದ್ದಾರೆ.