‘ಯಲಾಕುನ್ನಿ’ ಚಿತ್ರದ ಟೀಸರ್ ರಿಲೀಸ್

ಸೆನ್ಸೇಷನಲ್ ಸ್ಟಾರ್ ನಟ ಕೋಮಲ್ ಇದೀಗ ಖ್ಯಾತ ಖಳನಾಯಕ ವಜ್ರಮುನಿ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ‘ಯಲಾಕುನ್ನಿ’  ಎಂಬ ಈ ಚಿತ್ರ ಈಗಾಗಲೇ ತನ್ನ ಟೈಟಲ್ ಮೂಲಕವೇ ಭರ್ಜರಿ ಸೌಂಡ್ ಮಾಡಿದೆ. ಈ ಚಿತ್ರದ ಟೀಸರ್ ಕೋಮಲ್ ಕುಮಾರ್ ಸ್ಟುಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ.

ಎನ್ ಆರ್ ಪ್ರದೀಪ್ ನಿರ್ದೇಶಿಸಿರುವ ಈ ಚಿತ್ರವನ್ನು ನರಸಿಂಹ ಸಿನಿಮಾಸ್ ಮತ್ತು ಸೌಂದರ್ಯ ಲಹರಿ ಕಂಬೈನ್ಸ್ ಬ್ಯಾನರ್ ನಲ್ಲಿ ಅನುಸೂಯ ಕೋಮಲ್ ಕುಮಾರ್ ಹಾಗೂ ಸಹನಾ ಮೂರ್ತಿ ನಿರ್ಮಾಣ ಮಾಡುತ್ತಿದ್ದಾರೆ. ಕೋಮಲ್ ಹಾಗೂ ವಜ್ರಮುನಿ  ಮೊಮ್ಮಗ ಆಕರ್ಶ್ ಸೇರಿದಂತೆ  ನಿಸರ್ಗ, ಅಮೃತ, ಸುಚೇಂದ್ರ ಪ್ರಸಾದ್ , ಶಿವರಾಜ್ ಕೆ ಆರ್ ಪೇಟೆ , ಸಾಧು ಕೋಕಿಲ, ಮಿತ್ರ, ದತ್ತಣ್ಣ, ಯತಿರಾಜ್ ಜಗ್ಗೇಶ್, ರಘು ರಾಮನಕೊಪ್ಪ, ಜಯಸಿಂಹ ಮುಸುರಿ, ಮಹಾಂತೇಶ್, ರಾಜು ತಾಳಿ ಕೋಟೆ, ಮಾನಸಿ ಸುಧೀರ್, ತಬಲಾ ನಾಣಿ, ತೆರೆ ಹಂಚಿಕೊಂಡಿದ್ದಾರೆ.

ಹಾಲೇಶ್ ಭದ್ರಾವತಿ ಛಾಯಾಗ್ರಹಣ ಪ್ರದೀಪ್ ಅವರ ಸಂಭಾಷಣೆ ನರಸಿಂಹ ಸಾಹಸ ನಿರ್ದೇಶನ ಮುರಳಿ ಮಾಸ್ಟರ್ ನೃತ್ಯ ನಿರ್ದೇಶನ ಹಾಗೂ ದೀಪು ಎಸ್ ಕುಮಾರ್ ಸಂಕಲನವಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read